ಉದಯವಾಹಿನಿ, ಮುಂಬೈ: ಸುಮಾರು ಎರಡು ವರ್ಷಗಳ ಕಾಲ ನಡೆದ ಹಗರಣದಲ್ಲಿ 734 ಆನ್‌ಲೈನ್‌ ವಹಿವಾಟುಗಳಲ್ಲಿ, ಮುಂಬೈನ 80 ವರ್ಷದ ವೃದ್ಧನೊಬ್ಬನಿಗೆ ಪ್ರೀತಿ ಮತ್ತು ಸಹಾನುಭೂತಿಯ ಹೆಸರಿನಲ್ಲಿ ನಾಲ್ವರು ಮಹಿಳೆಯರು ಸುಮಾರು 9 ಕೋಟಿ ರೂ. ವಂಚಿಸಿರುವ ಘಟನೆ ನಡೆದಿದೆ.ಏಪ್ರಿಲ್‌ 2023ರಲ್ಲಿ, ವೃದ್ಧ ಶಾರ್ವಿ ಎಂಬ ಮಹಿಳೆಗೆ ಫೇಸ್‌‍ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದನು. ಆಕೆ ಫ್ರೆಂಡ್‌ ರಿಕ್ವೆಸ್ಟ್‌ ಸ್ವೀಕರಿಸಲಿಲ್ಲ. ಕೆಲವು ದಿನಗಳ ನಂತರ, ವೃದ್ಧನಿಗೆ ಶಾರ್ವಿಯ ಖಾತೆಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಂದಿತ್ತು. ಇಬ್ಬರೂ ಚಾಟ್‌ ಮಾಡಲು ಪ್ರಾರಂಭಿಸಿದರು ಮತ್ತು ಫೋನ್‌ ಸಂಖ್ಯೆಗಳು ವಿನಿಮಯವಾದವು. ಚಾಟ್‌ಗಳು ಫೇಸ್‌‍ಬುಕ್‌ನಿಂದ ವಾಟ್ಸಾಪ್‌ಗೆ ಸ್ಥಳಾಂತರಗೊಂಡವು. ಶಾರ್ವಿ ತನ್ನ ಪತಿಯಿಂದ ಬೇರ್ಪಟ್ಟು ಮಕ್ಕಳೊಂದಿಗೆ ವಾಸಿಸುತ್ತಿರುವುದಾಗಿ ಹೇಳಿದ್ದಳು. ಕ್ರಮೇಣ ಹಣ ಕೇಳಲು ಪ್ರಾರಂಭಿಸಿದಳು, ತನ್ನ ಮಕ್ಕಳು ಅಸ್ವಸ್ಥರಾಗಿದ್ದಾರೆಂದು ವೃದ್ಧನಿಗೆ ತಿಳಿಸಿದ್ದಳು.

ಕೆಲವು ದಿನಗಳ ನಂತರ, ಕವಿತಾ ಎಂಬ ಮಹಿಳೆ ಕೂಡ ಆ ವ್ಯಕ್ತಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಲು ಪ್ರಾರಂಭಿಸಿದಳು. ಶಾರ್ವಿಗೆ ಪರಿಚಿತಳು ಎಂದು ಹೇಳಿಕೊಂಡು ಸ್ನೇಹ ಬೆಳೆಸಲು ಬಯಸುತ್ತೇನೆ ಎಂದಿದ್ದಳು. ಶೀಘ್ರದಲ್ಲೇ ಅವಳು ವೃದ್ಧನಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದಳು ಮತ್ತು ಹಣ ಕೇಳಲು ಪ್ರಾರಂಭಿಸಿದಳು. ಡಿಸೆಂಬರ್‌ನಲ್ಲಿ ಶಾರ್ವಿಯ ಸಹೋದರಿ ಎಂದು ಹೇಳಿಕೊಂಡು ಇನ್ನೊಬ್ಬ ಮಹಿಳೆಯಿಂದ ಸಂದೇಶ ಬರಲಾರಂಭಿಸಿತು.ದಿನಾಜ್‌ ವೃದ್ಧನಿಗೆ ಶಾರ್ವಿ ಮೃತಪಟ್ಟಿದ್ದಾಳೆಂದು ಹೇಳಿ ಆಸ್ಪತ್ರೆಯ ಬಿಲ್‌ ಪಾವತಿಸಲು ಕೇಳಿದ್ದಳು. ದಿನಾಜ್‌ ಶಾರ್ವಿ ಮತ್ತು ವೃದ್ಧನ ನಡುವಿನ ವಾಟ್ಸಾಪ್‌ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿ ಹಣ ಸುಲಿಗೆ ಮಾಡಿದ್ದಳು.ವೃದ್ಧ ತನ್ನ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ದಿನಾಜ್‌ ಆತಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ.

Leave a Reply

Your email address will not be published. Required fields are marked *

error: Content is protected !!