ಉದಯವಾಹಿನಿ, ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಅಲ್ಟಿಮೇಟ್‌ ಹಂಡ್ರೆಡ್‌ (Ultimate Hundred XI) ಟೂರ್ನಿಯ ತಮ್ಮ ನೆಚ್ಚಿನ ಪ್ಲೇಯಿಂಗ್‌ xi ಅನ್ನು ಇಂಗ್ಲೆಂಡ್‌ ತಂಡದ ಆದಿಲ್‌ ರಶೀದ್‌ (Adil Rashid), ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಓವರ್ಟನ್‌ ಅವರು ಆರಿಸಿದ್ದಾರೆ. ಈ ಮೂವರು ಆಟಹಗಾರರು, ತಮ್ಮ ಹಂಡ್ರೆಡ್‌ ಪ್ಲೇಯಿಂಗ್‌ xiನಲ್ಲಿ ಭಾರತದಿಂದ ಮೂವರು ಸ್ಟಾರ್‌ಗಳಿಗೆ ಅವಕಾಶವನ್ನು ನೀಡಿದ್ದಾರೆ. ಒಬ್ಬರು ಬಾಟ್ಸ್‌ಮನ್‌, ಇನ್ನೊಬ್ಬರ ಆಲ್‌ರೌಂಡರ್‌ ಹಾಗೂ ಒಬ್ಬರು ವೇಗದ ಬೌಲರ್‌ ಅನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ರೋಹಿತ್‌ ಶರ್ಮಾಗೆ (Rohit Sharma) ಸ್ಥಾನವನ್ನು ನೀಡಲಾಗಿದೆ.

ಭಾರತದ ವೈಟ್‌ಬಾಲ್‌ ಕ್ರಿಕೆಟ್‌ನ ಸ್ಪೋಟಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಸ್ಥಾನವನ್ನು ಪಡೆದಿದ್ದಾರೆ. ಇವರು ಒಡಿಐ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. ಇವರು ಒಡಿಐ ಕ್ರಿಕೆಟ್‌ನಲ್ಲಿ ಆಡಿದ 273 ಪಂದ್ಯಗಳಿಂದ 32 ಶತಕಗಳೊಂದಿಗೆ 11168 ರನ್‌ಗಳನ್ನು ಕಲೆ ಹಾಕಿದ್ದಾರೆ. ಇನ್ನು ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ವೆಸ್ಟ್‌ ಇಂಡೀಸ್‌ ದಿಗ್ಗಜ ಕ್ರಿಸ್‌ ಗೇಲ್‌ ಅವರನ್ನು ಆರಿಸಿದ್ದಾರೆ. ಸ್ಕೈ ಸ್ಪೋರ್ಟ್ಸ್‌ ಅಪ್‌ಲೋಡ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆದಿಲ್‌ ರಶೀದ್‌, “ನಾನು ಎರಡನೇ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ರೋಹಿತ್‌ ಶರ್ಮಾ ಅವರನ್ನು ಆರಿಸುತ್ತೇನೆ. ಅವರ ವಿರುದ್ದ ನಾನು ಸಾಕಷ್ಟು ಬಾರಿ ಆಡಿದ್ದೇನೆ. ಅವರು ಶತಕಗಳನ್ನು ಬಾರಿಸಿದ್ದಾರೆ ಹಾಗೂ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಎದುರಾಳಿ ತಂಡದಿಂದ ಬಹುಬೇಗ ಪಂದ್ಯವನ್ನು ತೆಗೆದುಕೊಳ್ಳಲಿದ್ದಾರೆ. ಹಾಗಾಗಿ ಅವರನ್ನು ಆರಂಭಿಕ ಸ್ಥಾನಕ್ಕೆ ಆರಿಸಿದ್ದೇನೆ,” ಎಂದು ಹೇಳಿದ್ದಾರೆ.
“ತಂಡದ ಪ್ಲೇಯಿಂಗ್‌ xiನಲ್ಲಿ ನಾನು ರವೀಂದ್ರ ಜಡೇಜಾಗೆ ಸ್ಥಾನವನ್ನು ನೀಡುತ್ತೇನೆ. ಅವರು ಅತ್ಯುತ್ತಮ ಎಡಗೈ ಸ್ಪಿನ್ನರ್‌. ಇದರಲ್ಲಿ ಅನುಮಾನವೇ ಇಲ್ಲ. ಅವರು ಕೆಳ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಜೊತೆಗೆ ಅತ್ಯುತ್ತಮ ಫೀಲ್ಡರ್‌ ಕೂಡ ಹೌದು,” ಎಂದು ಹ್ಯಾರಿ ಬ್ರೂಕ್‌ ಶ್ಲಾಘಿಸಿದ್ದಾರೆ.

“ಹತ್ತನೇ ಸ್ಥಾನಕ್ಕೆ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಜಸ್‌ಪ್ರೀತ್‌ ಬುಮ್ರಾ ಅವರನ್ನು ಆರಿಸುತ್ತೇನೆ. ಅವರು ಯಾರ್ಕರ್‌, ನಿಧಾನಗತಿಯ ಎಸೆತಗಳು ಸೇರಿದಂತೆ ವೈಟ್‌ಬಾಲ್‌ ಕ್ರಿಕೆಟ್‌ ಬೌಲಿಂಗ್‌ ಕೌಶಲ ಅತ್ಯುತ್ತಮವಾಗಿದೆ. ಅವರು ಪವರ್‌ಪ್ಲೇ ಹಾಗೂ ಡೆತ್‌ ಓವರ್‌ ಸೇರಿದಂತೆ ಎರಡೂ ಹಂತದಲ್ಲಿ ಅವರು ಬೌಲ್‌ ಮಾಡಬಲ್ಲರು. ಪ್ರಸ್ತುತ ಅವರು ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು,” ಎಂದು ಅವರು ತಿಳಿಸಿದ್ದಾರೆ.

ಅಲ್ಟಿಮೇಟ್‌ ಹಂಡ್ರೆಡ್‌ XI: ಕ್ರಿಸ್‌ ಗೇಲ್‌, ರೋಹಿತ್‌ ಶರ್ಮಾ, ಸರ್‌ ವಿವಿಯನ್‌ ರಿಚರ್ಡ್ಸ್‌, ಬ್ರಿಯಾನ್‌ ಲಾರಾ, ಸ್ಯಾಮ್‌ ಕರನ್‌, ಆಂಡ್ರೆ ರಸೆಲ್‌, ರವೀಂದ್ರ ಜಡೇಜಾ,‌ ಕೈರೊನ್‌ ಪೊಲಾರ್ಡ್, ಶೋಯೆಬ್‌ ಅಖ್ತರ್‌, ಜಸ್‌ಪ್ರೀತ್‌ ಬುಮ್ರಾ, ಲಸಿತ್‌ ಮಾಲಿಂಗ.

Leave a Reply

Your email address will not be published. Required fields are marked *

error: Content is protected !!