ಉದಯವಾಹಿನಿ, ನಟ ಧ್ರುವ ಸರ್ಜಾ ಮಕ್ಕಳಾದ ರುದ್ರಾಕ್ಷಿ ಹಾಗೂ ಹಯಗ್ರೀವ ರಕ್ಷಾಬಂಧನ ಹಬ್ಬವನ್ನ ಮುದ್ದಾಗಿ ಆಚರಿಸಿದ್ದಾರೆ. ಎರಡೂವರೆ ವರ್ಷದ ರುದ್ರಾಕ್ಷಿ ಒಂದು ವರ್ಷದ ತನ್ನ ಸಹೋದರನಿಗೆ ರಾಖಿ ಕಟ್ಟಿ ಸಿಹಿಮುತ್ತು ಕೊಟ್ಟಿದ್ದಾರೆ.ಅಕ್ಕನಿಗೆ ಪುಟಾಣಿ ಹಯಗ್ರೀವ ಆಟಿಕೆಗಳನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ಬಳಿಕ ಇಬ್ಬರೂ ಕುಳಿತು ಟಿವಿ ವೀಕ್ಷಿಸಿದ್ದಾರೆ. ಈ ಶನಿವಾರ ರಕ್ಷಾಬಂಧನ ಹಬ್ಬ ಜರುಗಿತ್ತು. ಸರಳವಾಗಿ ಧ್ರುವ ಮಕ್ಕಳು ರಕ್ಷಾಬಂಧನ ಹಬ್ಬ ಆಚರಿಸಿ ಖುಷಿ ಪಟ್ಟಿದ್ದಾರೆ.ಧ್ರುವ ಮಕ್ಕಳಿಬ್ಬರೂ ಏನೂ ಅರಿಯದ ಸಣ್ಣ ವಯಸ್ಸಿನವರು. ಹೀಗಾಗಿ ಆಟವಾಡಿಕೊಂಡೇ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ. ಅಕ್ಕ ತಮ್ಮನ ಬಾಂಡಿಂಗ್ ನೋಡಿದವರೆಲ್ಲ ಚಪ್ಪಾಳೆ ತಟ್ಟುವಂತೆ ಮುದ್ದಾಗಿ ರಕ್ಷಾಬಂಧನ ಆಚರಿಸಿಕೊಂಡಿದ್ದಾರೆ.
