ಉದಯವಾಹಿನಿ, ಬೆಂಗಳೂರು: ಅಭಿಮಾನಿಗಳ ನೋವಲ್ಲಿ ಅರ್ಥ ಇದೆ. ಇದು ನೋವಾಗುವಂತಹ ವಿಷಯವೇ. ಏಕೆ ಹೀಗಾಗಿದೆ ಅನ್ನೋದು ಗೊತ್ತಿಲ್ಲ. ಹೈಕೋರ್ಟ್ ಆದೇಶದ ಮುಂದೆ ನಾವೆಲ್ಲರು ನಿಸ್ಸಹಾಯಕರಾಗಿದ್ದೇವೆ ಎಂದು ನಟಿ ಹಾಗೂ ಮಾಜಿ ಸಂಸದೆ ಸುಮಾಲತಾ ಬೇಸರ ಹೊರಹಾಕಿದ್ದಾರೆ. ಮೇರುನಟ ಡಾ. ವಿಷ್ಣುವರ್ಧನ್ ಸಮಾಧಿ ತೆರವು ವಿಚಾರವಾಗಿ ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳ ನೋವಲ್ಲಿ ಅರ್ಥ ಇದೆ. ಇದು ನೋವಾಗುವಂತಹ ವಿಷಯವೇ. ಏಕೆ ಹೀಗಾಗಿದೆ ಅನ್ನೋದು ಗೊತ್ತಿಲ್ಲ. ಹೈಕೋರ್ಟ್ ಆದೇಶ. ಅದರ ಮುಂದೆ ನಾವೆಲ್ಲರು ನಿಸ್ಸಹಾಯಕರು. ನೋವನ್ನ ಮಾತ್ರ ವ್ಯಕ್ತಪಡಿಸುವ ಪರಿಸ್ಥಿತಿಯಲ್ಲಿದ್ದೀವಿ. ಒಂದು ಕಡೆ ಅಧಿಕೃತ ಸಮಾಧಿ ಮೈಸೂರಿನಲ್ಲಿ ಸುಂದರವಾಗಿ ಬಂದಿದೆ. ಅದೊಂದು ಸ್ವಲ್ಪ ಸಮಾಧಾನ ಮಾಡಿಕೊಳ್ಳುವ ಅವಕಾಶ. ತೆರವು ಮಾಡುವ ಬಗ್ಗೆ ಮುಂಚೆನೇ ತಿಳಿಸಿ ಮಾಡಬೇಕಿತ್ತು. ಅಂತ್ಯಕ್ರಿಯೆ ನಡೆದ ಜಾಗವಾದ ಕಾರಣ ಸಣ್ಣದಾಗಿಯಾದ್ರು ಅಭಿಮಾನಿಗಳಿಗೆ ತಿಳಿಸುವ ಕೆಲಸ ಮಾಡಬೇಕಿತ್ತು. ಮೊದಲೇ ಘೋಷಣೆ ಮಾಡಿದ್ರೆ, ಅಭಿಮಾನಿಗಳಿಗೆ ಸಮಾಧಾನ ಇರುತ್ತಿತ್ತು. ಇದು ತಪ್ಪು ಅಂತ ನನಗೂ ಕೂಡ ಅನ್ನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
