ಉದಯವಾಹಿನಿ, ಲಂಡನ್: ತಮ್ಮ ದೂರದೃಷ್ಟಿಯ ಹಾಗೂ ನವೀನ ಬೋಧನಾ ಉಪಕ್ರಮದಿಂದ ಪ್ರಭಾವ ಬೀರುತ್ತಿರುವ ಭಾರತದ ಮೂವರು ಶಿಕ್ಷಣ ತಜ್ಞರು ಒಂದು ಮಿಲಿಯನ್ ಡಾಲರ್ ಮೊತ್ತದ ‘ಗ್ಲೋಬಲ್ ಟೀಚರ್ ಪ್ರಶಸ್ತಿ- 2026’ರ ಟಾಪ್ 50ರ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.ಮೀರತ್‌ನ ಶಾಲಾ ಶಿಕ್ಷಕ ಸುಧಾಂಶು ಶೇಖರ್ ಪಾಂಡಾ, ಜಮ್ಮು ಮತ್ತು ಕಾಶ್ಮೀರದ ಶಿಕ್ಷಕ ಮೆಹ್ರಾಜ್ ಖ್ರ್ಷಿದ್ ಮಲಿಕ್ ಮತ್ತು ಭಾರತದಾದ್ಯಂತ ಕೊಳೆಗೇರಿಗಳು ಮತ್ತು ಗ್ರಾಮೀಣ ಭಾಗದ ಜನರಿಗೆ ಶಿಕ್ಷಣ ದೊರೆಯಲು ಶ್ರಮಿಸುತ್ತಿರುವ ರೂಬಲ್ ನಾಗಿ ಅವರು ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದಾರೆ.
ಇಂಗ್ಲೆಂಡ್‌ನ ವರ್ಕಿ ಫೌಂಡೇಶನ್ ಜಿಇಎಂಎಸ್ ಎಜುಕೇಷನ್ ಸಹಯೋಗದಲ್ಲಿ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಜೊತೆಗೂಡಿ ಆಯೋಜಿಸಿರುವ ಜಾಗತಿಕ ಸ್ಪರ್ಧೆಯ 10ನೇ ಆವೃತ್ತಿಗೆ 139 ದೇಶಗಳಿಂದ 5 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
