ಉದಯವಾಹಿನಿ, ದರ್ಶನ್ ಬದುಕಿನ ಏಳುಬೀಳುಗಳ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಮಾತನಾಡಿದ್ದಾರೆ. 25 ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ವಿಜಯಲಕ್ಷ್ಮಿ ಮನಬಿಚ್ಚಿ ಮಾತಾಡಿದ್ದಾರೆ.
ಡೆವಿಲ್ ಚಿತ್ರದ ನಟಿ ರಚನಾ ರೈ ಸಂದರ್ಶನ ನಡೆಸಿದರು. ಡೆವಿಲ್ ಶೂಟಿಂಗ್ ಬಳಿಕ ಸರ್ಜರಿ ಮಾಡಿಸಲು ನಿರ್ಧರಿಸಲಾಗಿತ್ತು. ದರ್ಶನ್ ಅವರಿಗೆ ನಿಜವಾಗಿಯೂ ಬೆನ್ನುನೋವು ಇದೆ. ಡಾಕ್ಟರ್ ಸರ್ಜರಿ ಮಾಡೋಣ ಅಂತ ಹೇಳಿದ್ರು. ಆರು ತಿಂಗಳಿಂದ ಒಂದು ವರ್ಷ ಆರೈಕೆ ಬೇಕು ಅಂದ್ರು. ಫೈಟ್, ಡಾನ್ಸ್ ಮಾಡುವ ಹಾಗಿಲ್ಲ. ಡೆವಿಲ್ ಮುಗಿದ ನಂತರ ಸರ್ಜರಿ ಮಾಡಿಸಿಕೊಳ್ಳೋಣ. ವಿದೇಶದಲ್ಲಿ ಸರ್ಜರಿ ಮಾಡಿಸಿಕೊಳ್ಳೋಣ ಅಂತ ಹೇಳಿದ್ದರು. ದುಬೈ ಡಾಕ್ಟರ್ ಜೊತೆ ಮಾತುಕತೆ ಆಗಿತ್ತು. ಡೆವಿಲ್ ಮುಗಿದ ನಂತರ ಸರ್ಜರಿ ಮಾಡಿಸಿಕೊಳ್ಳುವ ಮಾತುಕತೆ ಆಗಿತ್ತು. ಈಗಲೂ ಜೈಲಿನಲ್ಲಿ ದರ್ಶನ್ ಅವರು ಬೆನ್ನುನೋವಿನಲ್ಲಿ ನರಳುತ್ತಿದ್ದಾರೆ ಎಂದು ವಿಜಯಲಕ್ಷ್ಮಿ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಬೇಲ್ ರದ್ದಾದಾಗ ದರ್ಶನ್ ಮೌನವಾಗಿದ್ದರು. ಯಾರೊಂದಿಗೂ ಮಾತನಾಡದೆ ಒಬ್ಬೊಬ್ಬರೆ ಕುಳಿತುಕೊಳ್ಳುತ್ತಿದ್ರು. ಬೇಲ್ ರದ್ದಾದ ವಿಷಯವನ್ನ ನಾನೇ ಫೋನ್ ಮಾಡಿ ಹೇಳಿದೆ. ಬೇಲ್ ರದ್ದಾಯ್ತು ಅಂದಕೂಡ್ಲೆ ಅವರು ಮೌನವಾದ್ರು. ಆಯಿತು, ಬ್ಯಾಗ್ ರೆಡಿ ಮಾಡು ರ‍್ತೀನಿ ಅಂತ ದರ್ಶನ್ ಹೇಳಿದ್ದರು. ಅಳುತ್ತಾ ಕೂರಬೇಡ. ನೀನು ಹುಷಾರು, ಮಗನನ್ನು ಚೆನ್ನಾಗಿ ನೋಡಿಕೊ ಅಂತ ದರ್ಶನ್ ಹೇಳಿದ್ದರೆಂದು ವಿಜಯಲಕ್ಷ್ಮಿ ಮಾತನಾಡಿದ್ದಾರೆ.
