ಉದಯವಾಹಿನಿ, ಮಂಗಳೂರು: ಎಲ್ಲರ ಕೈಯಲ್ಲಿ ಹಾಲು, ಸಮುದ್ರದ ಪಕ್ಕದಲ್ಲಿ ತದೇಕ ಚಿತ್ತದಿಂದ ನಿಂತು ಪ್ರಾರ್ಥಿಸುತ್ತಿರುವ ಇವರು ಪೂಜೆಯ (Worship) ನಂತರ ಕೈಯಲ್ಲಿದ್ದ ಹಾಲನ್ನೆಲ್ಲಾ ಸಮುದ್ರಕ್ಕೆ ಸುರಿದರು. ಕಾರಣ ಏನು ಗೊತ್ತೇ? ಆ ವಿಶೇಷದ ಕುರಿತು ಸಂಪೂರ್ಣ ವರದಿ ಇಲ್ಲಿದೆ.ಹೇರಳ ಮತ್ಸ್ಯಸಂಪತ್ತು ಲಭ್ಯವಾಗಲು, ಮತ್ಸ್ಯ ಸಂಪತ್ತು ಉಳಿಯಲು ಮೊಗವೀರ ಸಮಾಜ ಬಂಧುಗಳಿಂದ ನಗರದ ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ (Sea Shore) ಏಳುಪಟ್ಣ ಮೊಗವೀರ ಸಂಯುಕ್ತ ಸಭಾದ ವತಿಯಿಂದ ಸಮುದ್ರರಾಜನಿಗೆ ಹಾಲು ಅರ್ಪಿಸಿದ ಮೊಗವೀರರು
ಸಮುದ್ರರಾಜನಿಗೆ ಹಾಲು ಸಮರ್ಪಿಸಲು ಪ್ರತೀ ಗ್ರಾಮದಿಂದ ಹಾಲು ಸಂಗ್ರಹಣೆ ಮಾಡಲಾಗಿದೆ. ಮೊದಲಿಗೆ ಮೊಗವೀರ ಬಂಧುಗಳು ಬೊಕ್ಕಪಟ್ಣ ಬ್ರಹ್ಮ ಬಬ್ಬರ್ಯ ದೈವಸ್ಥಾನದಲ್ಲಿ ಬಬ್ಬರ್ಯ ದೈವಕ್ಕೆ ಪ್ರಾರ್ಥನೆ ನೆರವೇರಿಸಿದರು. ಬಳಿಕ ಸಮುದ್ರ ದಡದಲ್ಲಿ ಭಜನಾ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮಿ ಮಾತೆಗೆ ಪೂಜೆ ನೆರವೇರಿತು. ಬಳಿಕ ಕದ್ರಿ ಜೋಗಿ ಮಠದ ಸ್ವಾಮೀಜಿಗಳ ನೇತೃತ್ವದಲ್ಲಿ ಮೊಗವೀರ ಸಮಾಜ ಬಂಧುಗಳಿಂದ ಸಮುದ್ರಕ್ಕೆ ಕ್ಷೀರ ಸಮರ್ಪಣೆಯಾಯಿತು. ಜೊತೆಗೆ ಹಣ್ಣು, ಕಾಯಿಗಳನ್ನು ಸಮುದ್ರಕ್ಕೆ ಸಮರ್ಪಿಸಲಾಯಿತು.
