ಉದಯವಾಹಿನಿ, ಬೆಂಗಳೂರು: ಸರ್ಕಾರದ ವಿರುದ್ಧ ಸಿಟ್ಟಾಗಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡುವುದು ಹೊಸದೆನಲ್ಲ. ಆದರೆ ಈ ಬಾರಿ ಅಪರೂಪದಲ್ಲಿ ಅಪರೂಪ ಎಂಬಂತೆ ವಿಧಾನಸಭಾ ಸ್ಪೀಕರ್‌ ) ಯುಟಿ ಖಾದರ್‌ ಅವರು ಸಭಾತ್ಯಾಗ ಮಾಡಿದ ಅಚ್ಚರಿಯ ಪ್ರಸಂಗ ನಡೆದಿದೆ.

ಸರ್ಕಾರದ ಸಚಿವರುಗಳು ಸಮರ್ಪಕ ಉತ್ತರ ನೀಡದೇ ಇರುವುದು, ಪದೇ ಪದೇ ಕಲಾಪಕ್ಕೆ ಗೈರಾಗುತ್ತಿರುವುದಕ್ಕೆ ಸಿಟ್ಟಾದ ಸ್ಪೀಕರ್‌ ಸಿಟ್ಟಾಗಿ ಅರ್ಧದಿಂದಲೇ ಕಲಾಪದಿಂದ ಹೊರ ನಡೆದರು.
ಗೃಹ ಸಚಿವ ಪರಮೇಶ್ವರ್‌ ಅವರು ಲಿಖಿತ ರೂಪದ 230 ಪ್ರಶ್ನೆಗಳ ಪೈಕಿ ಪೈಕಿ 84 ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದರು. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿ ಸದನ ಆರಂಭವಾದಾಗಿನಿಂದಲೂ ಸಚಿವರಿಂದ ಸರಿಯಾದ ಉತ್ತರ ಬರುತ್ತಿಲ್ಲ. ಸರ್ಕಾರ ಸತ್ತು ಹೋಗಿದೆ, ತಿಥಿ ಮಾಡಬೇಕು, ತಿಥಿ ಊಟಕ್ಕೆ ಹೋಗಬೇಕು ಅಂತ ಅಶೋಕ್ ಆಕ್ರೋಶ ಹೊರ ಹಾಕಿದರು.

ಸಚಿವರು ಗೈರಾಗಿದ್ದಕ್ಕೆ ಮೊದಲೇ ಸಿಟ್ಟಾಗಿದ್ದ ಸ್ಪೀಕರ್‌, ಸದನದಲ್ಲಿ ಶಾಸಕರು ಪ್ರಶ್ನೆ ಕೇಳುತ್ತಾರೆ. ಎಲ್ಲವೂ ಚುಕ್ಕೆ ಗುರುತಿನ ಪ್ರಶ್ನೆ ಆಗುವುದಿಲ್ಲ. ಚುಕ್ಕೆ ಗುರುತಿಲ್ಲದ ಪ್ರಶ್ನೆಯೇ ಜಾಸ್ತಿ ಬದಲಾಯಿಸುತ್ತಾರೆ. ಗಮನ ಸೆಳೆಯುವ ಸೂಚನೆಗೂ ಸಚಿವರು ಉತ್ತರ ನೀಡುವುದಿಲ್ಲ. ಸಚಿವರು ಹೀಗೆ ಮಾಡಿದರೆ ಹೇಗೆ? ಮೂರು ಸಲ ನಾನು ಸಚಿವರಿಗೆ ಹೇಳಿದರೂ ಸುಧಾರಣೆ ಕಂಡು ಬರುತ್ತಿಲ್ಲ. ಸಂಬಂಧಿಸಿದ ಸಚಿವರು ಬಂದು ಸ್ಪಷ್ಟತೆ, ಕಾರಣ ಕೊಡಬೇಕು. ಅಲ್ಲಿಯವರೆಗೂ ನಾನು ಸದನ ನಡೆಸುವುದಿಲ್ಲ ಎಂದು ಗರಂ ಆಗಿ ಹೇಳಿ ಸದನದಿಂದ ಎದ್ದು ಹೋದರು.

Leave a Reply

Your email address will not be published. Required fields are marked *

error: Content is protected !!