ಉದಯವಾಹಿನಿ, ನೀವು ಬೇರೆ ಬೇರೆ ರೀತಿಯ ಲಡ್ಡುಗಳನ್ನು ತಿಂದಿರ್ತೀರಿ. ಆದ್ರೆ ರಾಗಿ ಲಡ್ಡುಗಳನ್ನು ಯಾವತ್ತಾದ್ರೂ ಟ್ರೈ ಮಾಡಿದ್ದೀರಾ? ರಾಗಿ ಲಡ್ಡುಗಳು ಬಾಯಿಗೂ ರುಚಿ ಮತ್ತು ಆರೋಗ್ಯಕ್ಕೂ ಒಳ್ಳೆಯದು. ಈಗ ನಿಮಗೆ ರಾಗಿ ಲಡ್ಡುಗಳ ಸ್ವೀಟ್ ಸ್ಟೋರ್ ನಲ್ಲೂ ಸಿಗುತ್ತವೆ. ಇನ್ನು ಇದನ್ನು ರಾಗಿ ಹಿಟ್ಟು, ಡ್ರೈ ಫ್ರೂಟ್ಸ್ ಮತ್ತು ಬೆಲ್ಲದ ಪಾಕದಿಂದ ಈಸಿಯಾಗಿ ಮಾಡಬಹುದು. ಮನೆಯಲ್ಲೇ ಮಾಡಿ ತಿನ್ನುವುದು ಇನ್ನೂ ಆರೋಗ್ಯಕ್ಕೆ ಒಳ್ಳೆಯದು. ನಿಮಗೆ ಬೇಕಾದಷ್ಟು ಸಿಹಿ ಸೇರಿಸಿಕೊಳ್ಳಬಹುದು. ಈ ಲಡ್ಡುವಿನಲ್ಲಿ ತುಪ್ಪ, ಕಡಲೆಕಾಯಿ, ಏಲಕ್ಕಿ ಮತ್ತು ಸೋಂಪು ಕೂಡ ಸೇರಿಸಲಾಗುತ್ತದೆ.
ಬಿಹಾರದ ಗಯಾ ಜಿಲ್ಲೆಯ ಬರಚಟ್ಟಿ ಬ್ಲಾಕ್ ಪ್ರದೇಶದ ಮಹಾದಲಿತ ಪ್ರಾಬಲ್ಯದ ಗ್ರಾಮವಾದ ಕೊಹ್ವರಿಯಲ್ಲಿ ರಾಜ್ಯದ ಮೊದಲ ರಾಗಿ ಮನೆ ತೆರೆಯಲಾಗಿದೆ. ಇಲ್ಲಿ ರಾಗಿ ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ಜನರು ಇದನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಸಮಾಜ ಮತ್ತು ಪರಿಸರದ ನಡುವೆ ಉತ್ತಮ ಸಮತೋಲನವನ್ನು ಸೃಷ್ಟಿಸುವ ಉದ್ದೇಶದಿಂದ ಬಿಹಾರದಲ್ಲಿ ತೆರೆಯಲಾದ ಈ ಮಿಲ್ಲೆಟ್ ಹೋಮ್, ರಾಗಿಗಳನ್ನು ಬ್ರಾಂಡ್ ಮಾಡುತ್ತಿದೆ. ಸಹೋದಯ ಟ್ರಸ್ಟ್ ತಯಾರಿಸುವ ರಾಗಿ ಲಡ್ಡುಗಳು ಗಯಾಜಿ ಜಿಲ್ಲೆಯಲ್ಲಿ ಹೆಚ್ಚು ಇಷ್ಟವಾಗುತ್ತಿವೆ. ಮಕ್ಕಳಿಗೂ ರಾಗಿ ಲಡ್ಡುಗಳು ತುಂಬಾ ಇಷ್ಟ. ಈ ಲಡ್ಡುಗಳನ್ನು ಬೆಲ್ಲದಿಂದ ತಯಾರಿಸಲಾಗುತ್ತದೆ. ರಾಗಿಯಿಂದ ಮುದ್ದೆ, ರೊಟ್ಟಿ, ಗಂಜಿ ಮಾಡ್ತೀವಿ. ಅದು ಬೋರ್ ಆಗಿದ್ರೆ ಯಾವಾಗಾದ್ರೂ ರಾಗಿ ಲಡ್ಡು ಮಾಡಿಕೊಂಡು ತಿನ್ನಿ. ಬಾಯಿಗೆ ರುಚಿಯಾಗುತ್ತೆ. ಆರೋಗ್ಯವೂ ಹಾಳಾಗಲ್ಲ.
