ಉದಯವಾಹಿನಿ, ನವದೆಹಲಿ: ಸಂಸತ್​ ಸದಸ್ಯರಿಗಾಗಿಯೇ ನಿರ್ಮಾಣಗೊಂಡಿರುವ 184 ಹೊಸ ಬಹುಮಹಡಿ ಫ್ಲಾಟ್​ಗಳನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಳಿಕ ವಸತಿ ಸಮುಚ್ಛಯ ಸ್ಥಳದಲ್ಲಿ ಸಿಂದೂರ (ವರ್ಮಿಲಿಯನ್) ಸಸಿ ನೆಟ್ಟು ಕಾರ್ಮಿಕರ ಶ್ರಮ ಸ್ಮರಿಸಿದರು. ಜೊತೆಗೆ ಕಾರ್ಮಿಕರೊಂದಿಗೆ ಕೆಲಕಾಲ ಸಂವಾದ ನಡೆಸಿದರು. ದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ನಿರ್ಮಾಣಗೊಂಡಿರುವ ಟೈಪ್-VII ಬಹುಮಹಡಿ ಫ್ಲ್ಯಾಟ್‌ ಕಟ್ಟಡ (MPs Flats) ಸಂಸದರಿಗೆ ವಸತಿ ಕೊರತೆ ನೀಗಿಸುವ ಉದ್ದೇಶ ಹೊಂದಿದೆ. ಅಲ್ಲದೇ ಆಧುನಿಕ, ಪರಿಸರ ಸ್ನೇಹಿ ನಿವಾಸಗಳನ್ನ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.
ಈ ಕಾರ್ಯಕ್ರಮದ ವೇಳೆ ಪ್ರಧಾನಿ ಜೊತೆಗೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಕೇಂದ್ರ ಸಚಿವರಾದ ಮನೋಹರ್​ ಲಾಲ್​ ಖಟ್ಟರ್​, ಕಿರಣ್​ ರಿಜಿಜು ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಸತಿ ಸಮುಚ್ಛಯ ಸ್ಥಳದಲ್ಲಿ ಸಿಂಧೂರ (ವರ್ಮಿಲಿಯನ್) ಸಸಿಯನ್ನು ನೆಟ್ಟರು. ಈ ವೇಳೆ, ಕಟ್ಟಡ ಕಾರ್ಮಿಕರ ಜೊತೆಗೆ ಕೂಡ ಸಂಭಾಷಣೆ ನಡೆಸಿದರು.

84 ಬಹುಮಹಡಿ ಫ್ಲ್ಯಾಟ್‌ನ ವಿಶೇಷತೆ ಏನು..?: * ಬಹುಮಹಡಿ ಫ್ಲ್ಯಾಟ್‌ನ 4 ಟವರ್‌ಗಳಿಗೆ 4 ನದಿಗಳ ಹೆಸರನ್ನು ನಾಮಕರಣ ಮಾಡಲಾಗಿದೆ, ಕೃಷ್ಣಾ, ಗೋದಾವರಿ, ಕೋಸಿ, ಹೂಗ್ಲಿ ಎಂಬ ಹೆಸರುಗಳನ್ನಿಡಲಾಗಿದೆ.* ಹೊಸದಾಗಿ ನಿರ್ಮಿಸಲಾದ ಪ್ರತಿಯೊಂದು ಟೈಪ್-7 ಫ್ಲಾಟ್‌ಗಳು ಅಂದಾಜು 5000 ಚದರ ಅಡಿ ಕಾರ್ಪೆಟ್ ಪ್ರದೇಶವನ್ನ ಒಳಗೊಂಡಿದೆ. ಕಚೇರಿಗಳು, ಸಿಬ್ಬಂದಿ ವಸತಿ ಮತ್ತು ವಸತಿ ಉದ್ದೇಶಗಳಿಗೆ ಅನುಕೂಲವಾಗುವ ವಿಭಾಗಗಳನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಸಂಸದರು ತಮ್ಮ ಸಾರ್ವಜನಿಕ ಕರ್ತವ್ಯಗಳನ್ನೂ ಮನೆಯಿಂದಲೇ ನಿರ್ವಹಿಸಲು ಅವಕಾಶವಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.* ಹೊಸ ಫ್ಲ್ಯಾಟ್‌ಗಳು ಉನ್ನತ ವರ್ಗದ ಟೈಪ್‌-8 ಬಂಗಲೆಗಳಿಗಿಂತಲೂ ಹೆಚ್ಚು ವಿಶಾಲವಾಗಿವೆ. ಈ ಬಹುಮಹಡಿ ಕಟ್ಟಡವನ್ನು ಅಲ್ಯೂಮಿನಿಯಂ ಶಟರಿಂಗ್‌ನೊಂದಿಗೆ ಏಕಶಿಲೆಯ ಕಾಂಕ್ರೀಟ್ ಬಳಸಿ ನಿರ್ಮಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!