ಉದಯವಾಹಿನಿ, ವಿಶಾಖಪಟ್ಟಣಂ: ಭಾರತೀಯ ನೌಕಾಪಡೆಯು ಅಭಿವೃದ್ಧಿಪಡಿಸಿರುವ ಎರಡು ಅತ್ಯಾಧುನಿಕ ಯುದ್ಧನೌಕೆಗಳಾದ ಉದಯಗಿರಿ ಹಾಗೂ ಹಿಮಗಿರಿ ( ನೌಕೆಗಳು ಸೇನೆಗ ಸೇರಲು ಸಜ್ಜಾಗಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಇದೇ ಆಗಸ್ಟ್‌ 26ರಂದು ಈ ಎರಡೂ ಸ್ವದೇಶಿ ನಿರ್ಮಿತ ನೌಕೆಗಳನ್ನು ಏಕಕಾಲಕ್ಕೆ ಸೇನೆಗೆ ನಿಯೋಜನೆ ಮಾಡಲಾಗುತ್ತದೆ ಎಂದು ಪೂರ್ವ ನೌಕಾ ಕಮಾಂಡ್ (ENC) ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಎರಡು ಪ್ರತ್ಯೇಕ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಯುದ್ಧನೌಕೆಗಳನ್ನು (War Ships) ವಿಶಾಖಪಟ್ಟಣದಲ್ಲಿ ಏಕಕಾಲಕ್ಕೆ ನೌಕಾಪಡೆಗೆ ಸೇರಿಸಲಾಗುತ್ತಿದೆ.

ಅಧಿಕಾರಿಗಳ ಪ್ರಕಾರ, ಸುಮಾರು 6,700 ಟನ್‌ಗಳಷ್ಟು ತೂಕ ಇರುವ P17A ವರ್ಗದ ಯುದ್ಧನೌಕೆಗಳು, ಹಿಂದಿನ ಶಿವಾಲಿಕ್-ವರ್ಗದ ಯುದ್ಧನೌಕೆಗಳಿಗಿಂತ ಶೇ.5 ಪಟ್ಟು ದೊಡ್ಡದಾಗಿದೆ. F35 ಎಂಬ ಉದಯಗಿರಿ ನೌಕೆಯು ಪ್ರಾಜೆಕ್ಟ್ 17A ರಹಸ್ಯ ಕಾರ್ಯಾಚರಣೆ ಸಾಮರ್ಥ್ಯದ ಯುದ್ಧನೌಕೆಯಿಂದ ಬಂದ 2ನೇ ರಚೆನೆಯಾಗಿದೆ. ಇದನ್ನು ಮುಂಬೈನ ಮಡಗಾಂವ್‌ ಡಾಕ್ ಹಡಗು ನಿರ್ಮಾಣ ಸಂಸ್ಥೆ (MDL) ಅಭಿವದ್ಧಿಪಡಿಸಿದೆ. ಇನ್ನೂ ಹಿಮಗಿರಿ ಯುದ್ಧನೌಕೆಯನ್ನು ಕೋಲ್ಕತ್ತದಲ್ಲಿರುವ ಗಾರ್ಡನ್ ರೀಚ್ ಹಡಗು ನಿರ್ಮಾಣ ಮತ್ತು ಎಂಜಿನಿಯರ್ಸ್‌ ಸಂಸ್ಥೆ (GRSE) ನಿರ್ಮಿಸಿದೆ. ಈ ಪಿ17ಎ ಯೋಜನೆಯು ಇದರ ಮೊದಲ ಪ್ರಯತ್ನವಾಗಿದೆ.

Leave a Reply

Your email address will not be published. Required fields are marked *

error: Content is protected !!