ಉದಯವಾಹಿನಿ, ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗಡೆ ಹಾಗೂ ಧ್ರುವ ಸರ್ಜಾ ಸಿನಿಮಾ ಮಾಡುವ ವಿಚಾರ ವಿವಾದಕ್ಕೆ ತಿರುಗಿದೆ. ಸುಮಾರು ಎಂಟು ವರ್ಷಗಳ ಹಿಂದೆ ನಡೆದ ಒಪ್ಪಂದದ ಪ್ರಕಾರ ಸಿನಿಮಾ ಇಲ್ಲಿಯವರೆಗೂ ಮಾಡುವುದಕ್ಕೆ ಆಗಿಲ್ಲ. ಒಪ್ಪಂದಕ್ಕೆ ಸಹಿಹಾಕುವ ಮೊದಲೇ ಅಡ್ವಾನ್ಸ್ ರೂಪದಲ್ಲಿ ನಟ ಧ್ರುವ ಸರ್ಜಾ ಹಣ ಪಡೆದಿದ್ದಾರೆ. ಆದ್ರೆ ಸಿನಿಮಾ ಮಾಡೋಕೆ ದಿನಗಳನ್ನ ಮುಂದೂಡುತ್ತಲೇ ಇದ್ದಾರೆ ಎಂದು ನಟ ಧ್ರುವ ಸರ್ಜಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಮುಂಬೈನ ಆಂಬೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಧ್ರುವ ಸರ್ಜಾ ವಿರುದ್ಧ ಪ್ರಕರಣ ದಾಖಲಾದ ಬಳಿಕ ಧ್ರುವ ಸರ್ಜಾ ಆಪ್ತ ಬಳಗದಿಂದ ಸ್ಪಷ್ಟನೆ ಸಿಕ್ಕಿತ್ತು. ಅಲ್ಲದೇ ಕನ್ನಡಕ್ಕೆ ನಿರ್ದೇಶಕರು ಆದ್ಯತೆ ನೀಡದೇ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಿನಿಮಾ ಮಾಡುವ ಬಗ್ಗೆ ನಿರ್ದೇಶಕ ಕೇಳಿಕೊಂಡಿದ್ದಾರೆ. ಇದಕ್ಕೆ ಧ್ರುವ ಸರ್ಜಾ ಒಪ್ಪದೇ ಇದ್ದಾಗ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು ಎಂದು ಧ್ರುವ ಆಪ್ತಬಳಗದಿಂದ ಸ್ಪಷ್ಟನೆ ಬಂದಿತ್ತು. ರಾಘವೇಂದ್ರ ಹೆಗಡೆಯವರನ್ನ ಕನ್ನಡ ವಿರೋಧಿ ಅಂತ ಬಿಂಬಿಸಿದ್ದಕ್ಕೆ ನಿರ್ದೇಶಕ ರಾಘವೇಂದ್ರ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
