
ಉದಯವಾಹಿನಿ, ಭುವನೇಶ್ವರ: ಐತಿಹಾಸಿಕ ಪುರಿ ಜಗನ್ನಾಥ ದೇವಾಲಯದ ಗೋಡೆಯ ಮೇಲೆ ದೇವಾಲಯವನ್ನು ಸ್ಫೋಟಿಸುವುದಾಗಿ ಭಯೋತ್ಪಾದಕ ದಾಳಿಯ ಬೆದರಿಕೆ ಬರಹ ಪತ್ತೆಯಾಗಿದೆ.ದೇವಸ್ಥಾನದ ಪರಿಕ್ರಮ ಮಾರ್ಗದುದ್ದಕ್ಕೂ ಇರುವ ಬುಧಿ ಮಾ ದೇವಾಲಯದ ಗೋಡೆಗಳ ಮೇಲೆ ಭಯೋತ್ಪಾದಕ ದಾಳಿಯ ಬೆದರಿಕೆ ಸಂದೇಶ ಪತ್ತೆಯಾಗಿದೆ. ದೇವಾಲಯದ ಒಂದು ಗೋಡೆಯ ಮೇಲೆ ಭಯೋತ್ಪಾದಕರು ದೇವಾಲಯದ ಮೇಲೆ ದಾಳಿ ಮಾಡಿ ನಾಶಪಡಿಸುತ್ತಾರೆ ಎಂದು ಬರೆದಿದ್ದಾರೆ.ಇನ್ನೊಂದು ಗೋಡೆಯ ಮೇಲೆ ಫೋನ್ ನಂಬರ್‌ಗಳನ್ನು ಬರೆದು, ಈ ಸಂಖ್ಯೆಗಳನ್ನು ಸಂಪರ್ಕಿಸದಿದ್ದರೆ ಗಲಭೆಗಳು ನಡೆಯುತ್ತವೆ ಎಂಬ ಎಚ್ಚರಿಕೆ ನೀಡಿದ್ದಾರೆ. ಸದ್ಯ ಸ್ಥಳಕ್ಕೆ ಪುರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಅಲ್ಲದೇ ಬೆದರಿಕೆ ಬರಹದ ಹಿಂದಿರುವವರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸದ್ಯ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ
