ಉದಯವಾಹಿನಿ, ನವದೆಹಲಿ: ಜನರಿಂದ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಮಹಾನಗರ ಹಾಗೂ ನಗರ ಪ್ರದೇಶಗಳ ಗ್ರಾಹಕರು ಉಳಿತಾಯ ಖಾತೆಯಲ್ಲಿ ಇಡಬೇಕಿದ್ದ ಮಿನಿಮಮ್ ಬ್ಯಾಲನ್ಸ್ ಮೊತ್ತವನ್ನು ಐಸಿಐಸಿಐ ಬ್ಯಾಂಕ್ ಇಳಿಕೆ ಮಾಡಿದೆ.ಆ.9 ರಂದು ಗ್ರಾಹಕರು ಮಾಸಿಕ ಕನಿಷ್ಠ ಸರಾಸರಿ ಮೊತ್ತ 50,000 ರೂ. ಇಡಬೇಕೆಂದು ಬ್ಯಾಂಕ್ ಹೊಸ ನಿಯಮ ಪ್ರಕಟಿಸಿತ್ತು. ಆದರೆ ಈಗ 15,000 ರೂ. ಇರಿಸಿದರೆ ಸಾಕು ಎಂದು ನಿಯಮವನ್ನು ಬದಲಾಯಿಸಿದೆ. ಆಗಸ್ಟ್ 1ರ ನಂತರ ಖಾತೆ ತೆರೆದವರಿಗೆ ಈ ನಿಯಮ ಅನ್ವಯವಾಗುತ್ತದೆ.ಮಿತಿಯನ್ನು 10,000 ರೂ.ಗಳಿಂದ 50,000 ರೂ.ಗಳಿಗೆ ಏರಿಸಿದ್ದಕ್ಕೆ ಗ್ರಾಹಕರಿಂದ ಟೀಕೆ ಬಂದ ಕೆಲ ದಿನಗಳ ನಂತರ ಈ ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಈ ಮಿತಿ 10,000 ರೂ. ಇತ್ತು. ಈಗ 5 ಸಾವಿರ ರೂ. ಏರಿಕೆ ಮಾಡಿದೆ.
ಅರೆ ನಗರ ಪ್ರದೇಶಕ್ಕೆ 25,000 ರೂ.ಗಳಿಂದ 7,500 ರೂ.ಗಳಿಗೆ ಮತ್ತು ಗ್ರಾಮೀಣ ಪ್ರದೇಶಕ್ಕೆ 10,000 ರೂ.ಗಳಿಂದ 2,500 ರೂ.ಗಳಿಗೆ ಇಳಿಕೆ ಮಾಡಲಾಗಿದೆ.
ಭಾರತದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), 2020 ರಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ರದ್ದುಗೊಳಿಸಿದೆ.
