ಉದಯವಾಹಿನಿ, ನವದೆಹಲಿ: ಭಾರತ ಕ್ರಿಕೆಟ್‌ ತಂಡ ದಿಗ್ಗಜ ಆಟಗಾರರಾದ ವಿರಾಟ್‌ ಕೊಹ್ಲಿ(Virat Kohli) ಹಾಗೂ ರೋಹಿತ್‌ ಶರ್ಮಾ (Rohit sharma) ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದ ಅಂತಿಮ ಹಂತದಲ್ಲಿದ್ದಾರೆ. ಈ ಇಬ್ಬರೂ ಈಗಾಗಲೇ ಟಿ20ಐ ಹಾಗೂ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ ಅವರು ಇನ್ನು ಮುಂದೆ ಕೇವಲ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲು ಬಯಸಿದ್ದಾರೆ. ಇದರ ನಡುವೆ ಭಾರತೀಯ ಕ್ರಿಕೆಟ್‌ನ ಮುಂದಿನ ಭವಿಷ್ಯದ ಸ್ಟಾರ್‌ ಆಟಗಾರನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದರಂತೆ ಟೀಮ್‌ ಇಂಡಿಯಾ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಶುಭಮನ್‌ ಗಿಲ್‌ (Shubman Gill) ಭವ್ಯಷ್ಯದ ಸ್ಟಾರ್‌ ಆಟಗಾರ ಎಂದು ಶ್ಲಾಘಿಸಿದ್ದಾರೆ.

ಸ್ಕೈ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ರವಿ ಶಾಸ್ತ್ರಿ, ಶುಭಮನ್‌ ಗಿಲ್‌ ಅವರಿಗೆ ವಯಸ್ಸು ಇನ್ನೂ ಚಿಕ್ಕದು. ಇದು ಅವರಿಗೆ ಲಾಭವಾಗಬಹುದು ಹಾಗೂ ಭಾರತ ತಂಡದ ಪರ ದೀರ್ಘಾವಧಿ ಆಡಬಹುದು ಎಂದು ಹೇಳಿದ್ದಾರೆ. ಶುಭಮನ್‌ ಗಿಲ್‌ ಅವರು ಭಾರತ ತಂಡದ ಪರ ದೀರ್ಘಾವಧಿ ಕ್ರಿಕೆಟ್‌ ಆಡಲಿದ್ದಾರೆ. ಇದರಲ್ಲಿ ಯಾವುದೇ ಪ್ರಶೆಗಳಿಲ್ಲ. ಏಕೆಂದರೆ ಅವರು ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಯಾವ ರೀತಿಯ ಪ್ರದರ್ಶನವನ್ನು ತೋರಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಅವರಿಗೆ ಇನ್ನೂ25 ವರ್ಷ ವಯಸ್ಸು. ಇದು ಅವರಿಗೆ ಲಾಭವನ್ನು ತಂದುಕೊಡಲಿದೆ,” ಎಂದು ರವಿ ಶಾಸ್ತ್ರಿ ತಿಳಿಸಿದ್ದಾರೆ. “ಅವರು ಇದೀಗ ಸರಿಯಾದ ಹಾದಿಯಲ್ಲಿದ್ದಾರೆ. ಅವರು ತಂಡದಲ್ಲಿದ್ದಾರೆ. ಅವರು ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅವರು ರಾಜಮನೆತನದವನು. ಅವರನ್ನು ನೀವು ನೋಡಿದಾಗ, ಅವರು ರಾಜಮನೆತನದ ಹುಡಗನ ರೀತಿ ಕಾಣುತ್ತಾರೆ. ಈ ಕಾರಣದಿಂದಲೇ ಅವರು ದೀರ್ಘಾವಧಿ ಇನಿಂಗ್ಸ್‌ ಆಡಲಿದ್ದಾರೆ,” ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!