ಉದಯವಾಹಿನಿ,ಕುಂಸಿ:  ಸಮೀಪದ ಚಿಕ್ಕಮರಸದ ಅಡಿಕೆ ತೋಟದಲ್ಲಿ ಗುರುವಾರ ತಡರಾತ್ರಿ ದುಷ್ಕರ್ಮಿಗಳು ಅಡಿಕೆ ಮರಗಳನ್ನು ಕಡಿತಲೆ ಮಾಡಿದ್ದು, ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಚಿಕ್ಕಮರಸದ ಗೋಪಶೆಟ್ಟಿಪುರದ ಸರ್ವೆ ನಂಬರ್. 5ರಲ್ಲಿ ನಾಗರಾಜ್ ಎಂ.ಡಿ. ಹಾಗೂ ಮಂಜಪ್ಪ ಎಂ.ಡಿ. ಅವರಿಗೆ ಸೇರಿದ 6 ಎಕರೆ ಅಡಿಕೆ ತೋಟದಲ್ಲಿ 4 ವರ್ಷದ ಅಡಿಕೆ ಮರಗಳನ್ನು ದುಷ್ಕರ್ಮಿಗಳು ಗುರುವಾರ ತಡರಾತ್ರಿ 60 ಅಡಿಕೆ ಮರಗಳನ್ನು ಕಡಿದಿದ್ದಾರೆ. ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!