ಉದಯವಾಹಿನಿ,ಹಾಸನ: ಕಾಂಗ್ರೆಸ್ ವಿರುದ್ಧ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.ಕಾಂಗ್ರೆಸ್ ಪಕ್ಷ ಮೊದಲು ಜೋಡೆತ್ತು, ನಂತರ ಕರು, ಆಮೇಲೆ ಕೈ ಬಂದಿದ್ದು. ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಬಂದ ಮೇಲೆ ಕೆಲವರಿಗೆ ಮದ ಬಂದಿದೆ. ಹಿಂದೂ ಸಂಘಟನೆ ಬ್ಯಾನ್ ಮಾಡ್ತಿವಿ, ಹಲಾಲ್, ಹಿಜಾಬ್ ಬಗ್ಗೆ ಮಾತನಾಡಿದರೇ ಒದ್ದು ಒಳಗಾಗ್ತಿವಿ ಅಂತ ಕೆಲವು ಮಂತ್ರಿಗಳೇ ಹೇಳ್ತಿದ್ದಾರೆ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು, ಇಂದಿರಾ ಗಾಂಧಿ ಕಾಲದಲ್ಲಿ ಎಮರ್ಜೆನ್ಸಿ ಇತ್ತು. ಆಗಲೇ ನಮ್ಮೆದೆಗೆ ಗುಂಡಿಟ್ಟರು ಹಿಂದೂ ಸಂಘಟನೆ ಹೆದರಲಿಲ್ಲ.ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತಂದು ಬಿಜೆಪಿಯವರು ನಾಟಕ ಮಾಡಿದರು.
ಒಂದೇ ಒಂದು ಗೋ ರಕ್ಷಣೆ ಮಾಡಲಿಲ್ಲ. ನಿಮಗೆ ಮಾಹಿತಿ ಇದ್ದರೂ, ನಾವು ಮಾಹಿತಿ ಕೊಟ್ಟರೂ ಒಂದೇ ಗೋವು ಹಿಡಿಯಲಿಲ್ಲ ಎಂದು ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಮತಾಂತರ ಕಾಯಿದೆ ಜಾರಿ ಕೇವಲ ಪೇಪರ್‌ನಲ್ಲಿ ತಂದರು. ಕಾನೂನು ಬಾಹಿರ ಎಂದು ಒಂದೇ ಒಂದು ಚರ್ಚ್ ನ್ನು ತೆರವುಗೊಳಿಸಲು ಬಿಜೆಪಿಗೆ ಆಗಲಿಲ್ಲ. ಇನ್ನು ಕಾಂಗ್ರೆಸ್‌ನದ್ದು ಅದೇ ಕಥೆ. ಕೇವಲ ಮುಸ್ಲಿಂ ಓಲೈಕೆಗೆ ಬಿದ್ದು ಇದೇ ರೀತಿ ಮತ್ತೆ ಮಾಡಿದ್ರೆ ಅದೇ ಗತಿ ಬರುವುದು. ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯದಂತೆ ರಾಜ್ಯಪಾಲರಿಗೆ ಒತ್ತಾಯ ಮಾಡುವ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
