ಉದಯವಾಹಿನಿ, ವಾಷಿಂಗ್ಟನ್‌: ರಷ್ಯಾದ ತೈಲ ಖರೀದಿಸುವ ದೇಶಗಳ ಮೇಲೆ ಹೊಸ ಸುಂಕ ವಿಧಿಸುವುದನ್ನು ಪರಿಗಣಿಸುವ ಅಗತ್ಯ ಸದ್ಯಕ್ಕಿಲ್ಲ. 2 ಅಥವಾ 3 ವಾರಗಳ ಬಳಿಕ ದ್ವಿತೀಯ ಸುಂಕದ ಬಗ್ಗೆ ಯೋಚಿಸುವುದಾಗಿ ಯುಎಸ್‌ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
ಅಲಾಸ್ಕಾದಲ್ಲಿ ಪುಟಿನ್‌ ಮತ್ತು ಟ್ರಂಪ್‌ ನಡುವಿನ ಮಹತ್ವದ ಸಭೆಯ ಯಾವುದೇ ಒಪ್ಪಂದಗಳಿಲ್ಲದೇ ಅಂತ್ಯಗೊಂಡಿತು. ಆದ್ರೆ ಸಭೆಯ ಬಳಿಕ ಮಾಧ್ಯಮವೊಂದರಲ್ಲಿ ಮಾತನಾಡಿದ ಟ್ರಂಪ್‌, ಹೊಸ ಸುಂಕಗಳ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ ಅಂತ ಭಾವಿಸುತ್ತೇನೆ. 2-3 ವಾರಗಳ ನಂತ್ರ ಯೋಚಿಸಬೇಕಾಗುತ್ತೆ, ನಂತರ ಮರುಪರಿಶೀಲಿಸಬೇಕಾಗಬಹುದು ಎಂದಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ಕುರಿತು ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾರತಕ್ಕೆ ಸಿಗುತ್ತಾ ರಿಲೀಫ್‌..?: ಟ್ರಂಪ್‌ ಎಚ್ಚರಿಕೆ ಬಳಿಕವೂ ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ್ದರಿಂದ ಕಳೆದ ತಿಂಗಳು ಭಾರತೀಯ ಸರಕುಗಳ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದ್ದಾರೆ. ಇದು ಆಗಸ್ಟ್‌ 27ರಿಂದ ಅನ್ವಯವಾಗಲಿದೆ. ಆದ್ರೆ ಟ್ರಂಪ್‌ ಅವರ ಹೇಳಿಕೆಯು ಭಾರತದ ಮೇಲಿನ ಸುಂಕದ ಪ್ರಮಾಣ 50 ರಿಂದ 25%ಗೆ ಇಳಿಕೆಯಾಲಿದೆಯೇ ಎಂಬುದನ್ನು ಕಾಡುನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!