ಉದಯವಾಹಿನಿ, ಹೈದರಾಬಾದ್‌: ಬಲವಂತದ ಮತಾಂತರ ಮೋಸದ ಮದ್ವೆ, ದ್ರೋಹ ಬಗೆದಿರುವ ಆರೋಪದ ಮೇಲೆ 1998ರಲ್ಲಿ ಭಾರತಕ್ಕೆ ವಲಸೆ ಬಂದಿದ್ದ ಪಾಕಿಸ್ತಾನದ ವ್ಯಕ್ತಿಯೊಬ್ಬನನ್ನ ಹೈದರಾಬಾದ್‌ನ ಲಂಗರ್‌ಹೌಸ್ ಪೊಲೀಸರು ಬಂಧಿಸಿದ್ದಾರೆ.ಹೈದರಾಬಾದ್‌ನ ಬಂಜಾರ ಹಿಲ್ಸ್‌ನ ಮೌಂಟ್ ಬಂಜಾರ ಕಾಲೋನಿಲ್ಲಿ ನೆಲೆಸಿದ್ದ ಪಾಕ್‌ ವ್ಯಕ್ತಿ 2016ರಲ್ಲಿ ಕೀರ್ತಿ ಎಂಬಾಕೆಯನ್ನ ಬಲವಂತದಿಂದ ಮತಾಂತರಗೊಳಿಸಿ ಮದ್ವೆಯಾಗಿದ್ದಾನೆಂದು ಖುದ್ದು ಪತ್ನಿಯೇ ದೂರು ನೀಡಿದ್ದಾಳೆ.

ಯೆಸ್‌… ಸಂತ್ರಸ್ತೆ ಹೇಳುವಂತೆ ಫಹಾದ್‌ 1998ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ. 2016ರಲ್ಲಿ ತನ್ನನ್ನ ಮದ್ವೆಯಾಗಲು ತನ್ನನ್ನ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದ. ಮೊದಲ ವಿಚ್ಛೇದನದ ಬಳಿಕ ನಾನು ದೌರ್ಬಲ್ಯ ಸ್ಥಿತಿಯಲ್ಲಿದ್ದೆ, ಇದರ ಲಾಭ ಪಡೆದು ನನ್ನನ್ನ ಮತಾಂತರಕ್ಕೆ ಒತ್ತಾಯಿಸಿದ್ದ. ಅದರಂತೆ ನನ್ನ ಹೆಸರನ್ನ ದೋಹಾ ಫಾತಿಮಾ ಅಂತ ಬದಲಾಯಿಸಿಕೊಂಡಿದ್ದೆ. ಮದ್ವೆ ಆಗೋವರ್ಗೂ ಅವನು ಪಾಕಿಸ್ತಾನದವನು ಅಂತ ಗೊತ್ತಿರಲಿಲ್ಲ. ಆದ್ರೆ ಪ್ರತಿವರ್ಷ ನಿಯಮಿತವಾಗಿ ಪಾಸ್‌ಪೋರ್ಟ್ ರಿನಿವಲ್‌ಗಾಗಿ ಆಯುಕ್ತರ ಕಚೇರಿಗೆ ಭೇಟಿ ಕೊಡ್ತಿದ್ದ. ಇದನ್ನ ಪರಿಶೀಲನೆ ಮಾಡಿದಾಗ ಅವನು ಪಾಕ್‌ನಿಂದ ವಲಸೆ ಬಂದಿರೋದು ಗೊತ್ತಾಯ್ತು. ಅಲ್ದೇ ಫಹಾದ್‌ ತನ್ನ ಕಂಪನಿಯಲ್ಲೇ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡಿದ್ದ. ಇದು ತಿಳಿದ ಬಳಿಕವೇ ನಾನು ಮೋಸ ಹೋಗಿದ್ದೇನೆ ಅನ್ನೋದು ಗೊತ್ತಾಯ್ತು ಅಂತ ಕೀರ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!