ಉದಯವಾಹಿನಿ, ಜೈಪುರ:  ಮಿಸ್ ಯೂನಿವರ್ಸ್ ಇಂಡಿಯಾ 2025 ಸ್ಪರ್ಧೆಯ ಕಿರೀಟಕ್ಕೆ ರಾಜಸ್ಥಾನದ ಮಣಿಕಾ ವಿಶ್ವಕರ್ಮ ಮುತ್ತಿಟ್ಟಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಮಿಸ್ ಯೂನಿವರ್ಸ್ ಇಂಡಿಯಾ 2024 ರಿಯಾ ಸಿಂಘಾ ಮಣಿಕಾ ವಿಶ್ವಕರ್ಮಗೆ ಕಿರೀಟ ತೊಡಿಸಿದ್ದಾರೆ. ಈ ಗೆಲುವಿನೊಂದಿಗೆ, ಈ ನವೆಂಬರ್‌ನಲ್ಲಿ ಥೈಲ್ಯಾಂಡ್‌ನಲ್ಲಿ ನಡೆಯಲಿರುವ 74ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಮಣಿಕಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಿಜೇತರ ವೇದಿಕೆಯಲ್ಲಿ ಮಣಿಕಾ ವಿಶ್ವಕರ್ಮ ಅವರೊಂದಿಗೆ ಮೊದಲ ರನ್ನರ್ ಅಪ್ ಆಗಿ ಉತ್ತರ ಪ್ರದೇಶದ ತಾನ್ಯಾ ಶರ್ಮಾ, ಎರಡನೇ ರನ್ನರ್ ಅಪ್ ಆಗಿ ಹರಿಯಾಣದ ಮೆಹಕ್ ಧಿಂಗ್ರಾ ಮತ್ತು ಮೂರನೇ ರನ್ನರ್ ಅಪ್ ಆಗಿ ಅಮಿಶಿ ಕೌಶಿಕ್ ಇದ್ದರು.
ಮಣಿಕಾಗೆ ಅಂತಿಮ ಸುತ್ತಿನಲ್ಲಿ, ಮಹಿಳಾ ಶಿಕ್ಷಣ ಅಥವಾ ಹಿಂದುಳಿದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ತನ್ನ ಆಯ್ಕೆಗಳನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, ಒಂದು ನಾಣ್ಯಕ್ಕೆ ಎರಡು ಮುಖಗಳು, ಹಿಂದಿನ ಕಾಲದಲ್ಲಿ ಮಹಿಳೆಯರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿರುವುದನ್ನು ನಾವು ನೋಡಿದ್ದೇವೆ. ನಮ್ಮ ಜನಸಂಖ್ಯೆಯ ಐವತ್ತು ಪ್ರತಿಶತದಷ್ಟು ಜನರಿಗೆ ಅವರ ಜೀವನವನ್ನು ಬದಲಾಯಿಸಬಹುದಾದ ಮೂಲಭೂತ ಸೌಕರ್ಯಗಳ ವಂಚನೆಯಾಗಿದೆ.ಸ್ ತುಕಡಿಗಳನ್ನು ಮತ್ತು ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ.
ನಾನು ಏನಾದರೂ ಪ್ರಗತಿ ಸಾಧಿಸಬೇಕಾದರೆ, ನಾನು ಮಹಿಳಾ ಶಿಕ್ಷಣದ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ. ಶಿಕ್ಷಣ ಕೇವಲ ಒಬ್ಬ ವ್ಯಕ್ತಿಯ ಜೀವನವನ್ನು ಬದಲಾಯಿಸುವುದಿಲ್ಲ; ಇದು ಈ ದೇಶದ, ಈ ಪ್ರಪಂಚದ ಭವಿಷ್ಯದ ಸಂಪೂರ್ಣ ಸ್ತರವನ್ನು ಬದಲಾಯಿಸುತ್ತದೆ ಎಂದು ಹೇಳಿದ್ದಾರೆ. ರಾಜಸ್ಥಾನದ ಶ್ರೀ ಗಂಗಾನಗರದಿಂದ ಬಂದಿರುವ ಮಣಿಕಾ, ಪ್ರಸ್ತುತ ದೆಹಲಿಯಲ್ಲಿ ನೆಲೆಸಿದ್ದಾರೆ. ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರದ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಅವರು ಶಿಕ್ಷಣದ ಜೊತೆ ಮಾಡಲಿಂಗ್‌ ಕ್ಷೇತ್ರದಲ್ಲಿಯೂ ಹೆಜ್ಜೆ ಇಟ್ಟಿದ್ದಾರೆ. ಇವರು ವಿದೇಶಾಂಗ ಸಚಿವಾಲಯದ ಅಡಿಯಲ್ಲಿ ಆಯೋಜಿಸಲಾದ ಬಿಮ್‌ಸ್ಟೆಕ್ ಸೆವೊಕಾನ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಲಲಿತ ಕಲಾ ಅಕಾಡೆಮಿ ಮತ್ತು ಜೆಜೆ ಸ್ಕೂಲ್ ಆಫ್ ಆರ್ಟ್ಸ್‌ನಂತಹ ಗೌರವಾನ್ವಿತ ಸಂಸ್ಥೆಗಳು ಅವರ ಕಲಾತ್ಮಕತೆಯನ್ನು ಗುರುತಿಸಿವೆ.

Leave a Reply

Your email address will not be published. Required fields are marked *

error: Content is protected !!