ಉದಯವಾಹಿನಿ, ಚಂಡೀಪುರ: ಭಾರತವು ಒಡಿಶಾ ಕರಾವಳಿಯ ಚಂಡಿಪುರದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ5 ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಮಧ್ಯಂತರ ಶ್ರೇಣಿಯ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ದೇಶೀಯವಾಗಿ ತಯಾರಿಸಿದ ಖಂಡಾಂತರ ಕ್ಷಿಪಣಿ ಅಗ್ನಿ 5,000 ಕಿ.ಮೀ. ವಾಪ್ತಿಯ ಶತ್ರು ನೆಲೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಡಿಆರ್‌ಡಿಓ (ಈ್ಕಈ) ನೇತೃತ್ವದಲ್ಲಿ 2012ರ ಏ.19ರಂದು ಅಗ್ನಿ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆ ನಡೆದಿತ್ತು. ಅಗ್ನಿ5 ಕ್ಷಿಪಣಿ ಒಂದು ಟನ್‌ಗಿಂತಲೂ ಹೆಚ್ಚು ಭಾರದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದು, ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ ಎಂದು ಡಿಆರ್‌ಡಿಓ ಮೂಲಗಳು ತಿಳಿಸಿವೆ.
ಪರಮಾಣು ಸಾಮರ್ಥ್ಯ ಹೊಂದಿರುವ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಕ್ಷಿಪಣಿಯಾಗಿರುವ ಅಗ್ನಿ 5 ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿ 5,000 ಕಿ.ಮೀ.ವರೆಗಿನ ಗುರಿಗಳನ್ನು ಭೇದಿಸಬಹುದು. ಇದು ಏಕಕಾಲದಲ್ಲಿ ಬಹು ಗುರಿಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ.
