ಉದಯವಾಹಿನಿ, ಹೆಲ್ತಿ ಟಿಪ್ಸ್: ಉತ್ತಮ ಆರೋಗ್ಯಕ್ಕಾಗಿ ಈ ಹತ್ತು ಆಹಾರಗಳನ್ನು ಇಂದೇ ಡಯೆಟ್ ನಲ್ಲಿ ಸೇರಿಸಿಕೊಳ್ಳಿ. ನೀವು ಯಾವಾಗಲೂ ಫಿಟ್ ಆಗಿರಲು ಬಯಸುತ್ತೀರಾ? ಹಾಗಾದರೆ ದೈಹಿಕ ವ್ಯಾಯಾಮದ ಜೊತೆಗೆ , ಆಹಾರ ಕ್ರಮದ ಮೇಲೆ ಗಮನಹರಿಸುವುದು ಕೂಡಾ ಬಹಳ ಮುಖ್ಯ. ನಾವು ಪ್ರತಿದಿನ ಸೀಮಿತ ಪ್ರಮಾಣದಲ್ಲಿ ಮಾತ್ರ ಆಹಾರವನ್ನು ಸೇವಿಸಬಹುದು. ಆದ್ದರಿಂದ, ಆರೋಗ್ಯಕರ ಆಹಾರವನ್ನು ನಮ್ಮ ಡಯೆಟ್ ನಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ನಾವು ಸೇವಿಸುವ ರೋಗ್ಯಕರ ಹಾರ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ನೀಡುತ್ತದೆ ನಿಜ. ಅದರೆ ಜೊತೆಗೆ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಕೂಡಾ ನೀಡುತ್ತದೆ. ಪೌಷ್ಠಿಕಾಂಶದ ಮೌಲ್ಯವನ್ನು ಹೊಂದಿರುವ ವಿಶ್ವದ  ಆರೋಗ್ಯಕರ ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ. ಆರೋಗ್ಯವಾಗಿರಲು ಬಯಸಿದರೆ, ಇಂದೇ ಈ ಆಹಾರಗಳನ್ನು ಸೇವಿಸಲು ಪ್ರಾರಂಭಿಸಿ.

1).  ಆವಕಾಡೊ ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದೆ, ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವಕಾಡೋ ಮೊನೊಅನ್ಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆವಕಾಡೊದಲ್ಲಿರುವ ಬೀಟಾ-ಸಿಟೊಸ್ಟೆರಾಲ್ ಇದು ಆಹಾರದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳದಂತೆ ತಡೆಯುತ್ತದೆ.

2).  ಬೇಳೆ ಕಾಳುಗಳು ಕೂಡಾ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೆಸರು, ಹೆಸರು ಕಾಳು, ಮಸೂರ್ ದಾಲ್, ಕಡಲೆ ಕಾಳು, ಉದ್ದಿನ ಬೇಳೆ, ಹೀಗೆ ಯಾವ ಬೇಳೆ ಕಾಳುಗಳೇ ಆಗಿರಲಿ ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ ಆಹಾರ. ಬೇಳೆ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ನಾರಿನ ಅಂಶವನ್ನು ಹೊಂದಿರುತ್ತವೆ. ಅಲ್ಲದೆ, ದ್ವಿದಳ ಧಾನ್ಯಗಳಲ್ಲಿ ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಕೂಡ ಇದ್ದು, ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಜೊತೆಗೆ ರಕ್ತದೊತ್ತಡವನ್ನು ಸಹ ನಿಯಂತ್ರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!