ಉದಯವಾಹಿನಿ, ಬೆಂಗಳೂರು: ಸದನಕ್ಕೆ ಗೈರಾಗಬೇಡಿ ಮಿಸ್ ಮಾಡದೇ ವಿಧಾಸಭಾ ಅಧಿವೇಶನದಲ್ಲಿ ಭಾಗವಹಿಸಿ ಕಲಾಪವನ್ನು ಯಶಸ್ವಿಗೊಳಿಸಿ ಅಂತ ಸಿಎಂ ಸಿದ್ದರಾಮಯ್ಯ ಅವರು ನೂತನ ಶಾಸಕರಿಗೆ ಪಾಠ ಮಾಡಿದ್ದಾರೆ. ಅವರು ಇಂದು 16ನೇ ವಿಧಾನಸಭೆಗೆ ನೂತನವಾಗಿ ಆಯ್ಕೆಯಾದ ಶಾಸಕರುಗಳಿಗೆ ಬೆಂಗಳೂರಿನಲ್ಲಿ ನಡೆಸುತ್ತಿರುವ ತರಬೇತಿ ಕಾರ್ಯಕ್ರಮಕ್ಕೆ ಆಗಮಿಸಿದರು. ಇದೇ ವೇಳೆ ಅವರು ಜೀವನದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಸಾರಿ ಶಾಸಕರಾಗಿ ಆಯ್ಕೆ ಆಗಬೇಕು ಅಂತ ಆಸೆ ಇರುತ್ತದೆ. ಕೆಲವು ಮಂದಿ ಸದನಕ್ಕೆ ಬರುವುದಿಲ್ಲ, ಇದು ಸರಿಯಲ್ಲ, ಶಾಸನ ಸಭೆ ನಡೆಯುತ್ತಿರುವ ವೇಳೆಯಲ್ಲಿ ಶಾಸಕರು ಸಭೆಗೆ ಬರಬೇಕು. ಈ ಮೂಲಕ ಎಲ್ಲಿಗೂ ಮಾದರಿಯಾಗಬೇಕು ಅಂತ ತಿಳಿಸಿದರು. ಜನರು ನಿಮ್ಮ ಮೇಲೆ ನಿರೀಕ್ಷೆ ಇಟ್ಟುಕೊಂಡು ನಿಮ್ಮ ಆಯ್ಕೆ ಮಾಡಿ, ಶಾಸನ ಸಭೆಗೆ ಕಳುಹಿಸಿಕೊಟ್ಟಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡದೇ ಕೆಲಸ ಮಾಡಿ ಅಂತ ಮನವಿ ಮಾಡಿದರು.
