ಉದಯವಾಹಿನಿ, ರಾಯಚೂರು: ಹಳೆಯ ದ್ವೇಷ ಹಿನ್ನೆಲೆ ಗಣೇಶ ಮೆರವಣಿಗೆ ವೇಳೆ ಇಬ್ಬರು ಯುವಕರು ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆದಿರುವ ಘಟನೆ ರಾಯಚೂರು ನಗರದ ಗಂಗಾನಿವಾಸ ರಸ್ತೆಯಲ್ಲಿ ನಡೆದಿದೆ.
ಪ್ರಶಾಂತ್ ಹಾಗೂ ಪ್ರವೀಣ್ ಮಳಿಗೆಯೊಂದರ ಟೆರೆಸ್ ಮೇಲೆ ನಿಂತು ಕಲ್ಲು ತೂರಿದ್ದಾರೆ. ಗಂಗಾನಿವಾಸ ಮಾರ್ಗ ಮೂಲಕ ಮೆರವಣಿಗೆ ಬಂದಿದ್ದಕ್ಕೆ ಯುವಕರು ವಿನಯ್ ಕುಮಾರ್ ಹಾಗೂ ಗಣೇಶ್ ಇಬ್ಬರನ್ನ ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ವಿನಯ್ ಕುಮಾರ್ , ಗಣೇಶ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಲ್ಲು ತೂರಿದ ಯುವಕರನ್ನ ಕೂಡಲೇ ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಹಿನ್ನೆಲೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
