ಉದಯವಾಹಿನಿ, ದುಬೈನಲ್ಲಿ ನಡೆದ 2024ರ ಸಾಲಿನ ಸೈಮಾ ಪ್ರಶಸ್ತಿ ವಿತರಣಾ ಸಮಾರಂಭದ ವೇದಿಕೆಯಲ್ಲೇ ಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂದು ದುನಿಯಾ ವಿಜಯ್‌ ಸಿಟ್ಟು ಹೊರಹಾಕಿದ್ದಾರೆ.ಸೌತ್‌ ಇಂಡಸ್ಟ್ರಿಯ ಕಲಾವಿದರು, ತಂತ್ರಜ್ಞರು ಭಾಗಿಯಾಗಿ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಆದರೆ ಈ ಕಾರ್ಯಕ್ರಮದಲ್ಲಿಕನ್ನಡಿಗರಿಗೆ ಅವಮಾನ ಮಾಡಲಾಗಿದೆ ಎಂದು ಭೀಮಾ ಸಿನಿಮಾಗೆ ಪ್ರಶಸ್ತಿ ಸ್ವೀಕರಿಸಿದ ನಟ ದುನಿಯಾ ವಿಜಯ್ ವೇದಿಕೆಯಲ್ಲೇ ಆಯೋಜಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಎಲ್ಲಾ ಭಾಷೆಯ ಸಿನಿಮಾ ನಟ, ನಟಿಯರಿಗೆ ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಕೊನೆಗೆ ಕನ್ನಡ ಚಿತ್ರರಂಗದವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಪ್ರತಿಬಾರಿಯೂ ಈ ರೀತಿಯಾಗಿಯೇ ನಡೆದುಕೊಂಡು ಬಂದಿದೆ. ಕೊನೆಗೆ ಪ್ರಶಸ್ತಿ ನೀಡುವಾಗ ಎಲ್ಲರೂ ಎದ್ದು ಹೋಗಿರುತ್ತಾರೆ. ಎಲ್ಲರೂ ಇದ್ದಾಗಲೇ ಕನ್ನಡಿಗರಿಗೂ ಕರೆದು ಅವಾರ್ಡ್ ಕೊಡಿ ಎಂದು ವೇದಿಕೆಯ ಮೇಲೆಯೇ ನಟ ದುನಿಯಾ ವಿಜಯ್ ಗರಂ ಆಗಿದ್ದಾರೆ. ಮುಂದುವರೆದು ಇದೇ ರೀತಿ ಪುನರಾವರ್ತನೆ ಮಾಡಿದರೆ ನಾವ್ಯಾರು ಈ ಕಾರ್ಯಕ್ರಮಕ್ಕೆ ಬರುವುದಿಲ್ಲ ಎನ್ನುವ ಖಡಕ್ ಸಂದೇಶವನ್ನ ರವಾನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!