ಉದಯವಾಹಿನಿ, ಬಳ್ಳಾರಿ: ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಪ್ರಾಮಾಣಿಕರಾಗಿದ್ದರೆ ಧರ್ಮಸ್ಥಳ ಬುರುಡೆ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯನವರ ಬಳಿ ಮಾತನಾಡಿ ಸಿಬಿಐ, ಎನ್ಐಎಗೆ ಕೊಡಲು ತಿಳಿಸಲಿ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸವಾಲು ಎಸೆದಿದ್ದಾರೆ.ತನ್ನ ವಿರುದ್ಧ ಸೆಂಥಿಲ್ ಮಾನನಷ್ಟ ಪ್ರಕರಣ ಹೂಡಿದ ಬಗ್ಗೆ ಬಳ್ಳಾರಿಯ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಡೀ ವಿಶ್ವಕ್ಕೆ ಹಿಂದೂ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಎಡಪಂಥೀಯ ಮನಸ್ಥಿತಿ, ನಗರ ನಕ್ಸಲರು ಭಾಗಿಯಾಗಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೆಲವರು ಧರ್ಮಸ್ಥಳದ ಬಗ್ಗೆ ಭಯದ ವಾತಾವರಣ ಸೃಷ್ಟಿಸಿ ಅಪಪ್ರಚಾರ ಮಾಡಿದರು. ಚಿನ್ನಯ್ಯ, ಸುಜಾತಾ ಭಟ್ ಅವರನ್ನು ಕರೆದುಕೊಂಡು ಬಂದು ಅಪಪ್ರಚಾರ ಮಾಡಲು ಹೊರಟಿದ್ದರು. ಮಾಧ್ಯಮ ಹಾಗೂ ಎಸ್ಐಟಿಯಿಂದ ಈ ವಿಚಾರ ಹೊರಗಡೆ ಹೊರಗಡೆ ಬಂದಿದೆ ಎಂದರು. ಈ ಷಡ್ಯಂತ್ರದ ಹಿಂದೆ ಕರ್ನಾಟಕದಲ್ಲಿ ಐಎಎಸ್ ಅಧಿಕಾರಿ ಆಗಿ ಕೆಲಸ ಮಾಡಿದ್ದ ಸಸಿಕಾಂತ್ ಸೆಂಥಿಲ್ ಕೈವಾಡ ಇದೆ ಎನ್ನುವುದನ್ನು ಹೇಳಿದ್ದು ನಾನು. ಮುಸುಕುಧಾರಿ ಮೂಲವನ್ನು ಹೇಳಿದ್ದು ನಾನು. ಎಡಪಂಥೀಯ ವಿಚಾರಾಧಾರೆಗಳನ್ನ ಇಟ್ಕೊಂಡು ಐಎಎಸ್ ಆಗಿ ಸೆಂಥಿಲ್ ಕೆಲಸ ಮಾಡಿದ್ದಾರೆ ಎಂದು ದೂರಿದರು.
