
ಉದಯವಾಹಿನಿ, ಬೀದರ್: ಖಾಸಗಿ ಶಾಲಾ ಬಸ್ ಹರಿದು ಯುಕೆಜಿ ಓದುತ್ತಿದ್ದ 6 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಎಕ್ಕಂಬಾ ಗ್ರಾಮದಲ್ಲಿ ನಡೆದಿದೆ.ಕಾವೇರಿ ಆಕಾಶ್ ಮೃತ ಬಾಲಕಿ. ವಿದ್ಯಾರ್ಥಿನಿ ಶಾಲೆಯ ಬಸ್‌ನಿಂದ ಕೆಳಗಡೆ ಇಳಿಯುವಾಗ ಅವಘಡ ಸಂಭವಿಸಿದೆ. ಚಾಲಕನ ನಿರ್ಲಕ್ಷ್ಯವೇ ಪುಟ್ಟ ವಿದ್ಯಾರ್ಥಿನಿ ದಾರುಣ ಸಾವಿಗೆ ಕಾರಣವಾಗಿದೆ. ಸದ್ಯ ನಿರ್ಲಕ್ಷ್ಯ ಮಾಡಿದ ಚಾಲಕನ ವಿರುದ್ಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
