ಉದಯವಾಹಿನಿ, ಗಾಂಧಿನಗರ: ಗುಜರಾತ್‌ನ ಪಾವಗಡ ಶಕ್ತಿಪೀಠದ ಬಳಿ ಭೀಕರ ದುರಂತ ಸಂಭವಿಸಿದೆ. ಪಾವಗಡ ರೋಪ್‌ವೇಗಾಗಿ ನಿರ್ಮಾಣ ಸಾಮಗ್ರಿ ಸಾಗಿಸುತ್ತಿದ್ದ ಟ್ರಾಲಿ ಮುರಿದು ಬಿದ್ದ ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ. ಪಂಚಮಹಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, 6 ಮಂದಿ ಸಾವನ್ನಪ್ಪಿರುವುದಾಗಿ ಡಿಎಸ್‌ಪಿ ಹರ್ಷ ದುಧಾತ್ ತಿಳಿಸಿದ್ದಾರೆ. ಮೃತರ ಪೈಕಿ ಇಬ್ಬರು ಲಿಫ್ಟ್ ಆಪರೇಟರ್, ಇಬ್ಬರು ಕಾರ್ಮಿಕರು ಹಾಗೂ ಇಬ್ಬರು ಇತರ ವ್ಯಕ್ತಿಗಳು ಸೇರಿದ್ದಾರೆ.
ಪಾವಗಡ ಬೆಟ್ಟದ ದೇವಸ್ಥಾನದಲ್ಲಿ ರೋಫ್‌ವೇನ ಕೇಬಲ್ ತಂತಿ ತುಂಡಾಗಿ ದುರಂತ ಸಂಭವಿಸಿದೆ ಎಂದು ಗುಜರಾತ್ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಗುಜರಾತ್ ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ.
