ಉದಯವಾಹಿನಿ,ಹಾಸನ: ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನಿಗೆ ಯಾರೂ ಹಣದ ಆಮಿಷ ಒಡ್ಡಿಲ್ಲ. ಸುಮಂತ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾನೆ ಎಂದು ಯೂಟ್ಯೂಬರ್ ಅಭಿಷೇಕ್ ತಂದೆ ಮುದ್ದುಗೋಪಾಲ ಹೇಳಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದಾನೆ. ಚಂದನ್‌ಗೌಡ ಎಲೆಕ್ಷನ್‌ಗೆ ವಿಡಿಯೋ ಎಡಿಟ್ ಮಾಡಲು ಹೋಗಿದ್ದ, ಅಲ್ಲಿಂದ ಯೂಟ್ಯೂಬರ್ ಆದ. ನನ್ನ ಪತ್ನಿ ಹೆಸರಿನಲ್ಲಿ ಇಎಂಐನಲ್ಲಿ ಕ್ಯಾಮೆರಾ ಕೊಡಿಸಿದ್ದೆ. ಸೌಜನ್ಯ ಪ್ರಕರಣದ ಹೋರಾಟ ಶುರುವಾದಾಗ ಧರ್ಮಸ್ಥಳಕ್ಕೆ ಹೋದ. ಅಲ್ಲಿ ತಿಮರೋಡಿ, ಮಟ್ಟಣ್ಣನವರ್ ಪರಿಚಯ ಆಗಿದೆ. ಅಲ್ಲಿ ತಿಮರೋಡಿ ಸಂಬಂಧಿಕರ ಮನೆಯಲ್ಲಿ ತಂಗುತಿದ್ದ ಎಂದರು.ನನ್ನ ಮಗ ಧರ್ಮಸ್ಥಳ ಪ್ರಕರಣದ ಎಲ್ಲಾ ವೀಡಿಯೋಗಳನ್ನು ಮಾಡುತ್ತಿದ್ದ. ನನ್ನ ಮಗನ ಮೇಲೆ ಧರ್ಮಸ್ಥಳದಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ, ಹಲ್ಲೆ ಆದಾಗ ನಾನು ಧರ್ಮಸ್ಥಳಕ್ಕೆ ಹೋಗಿದ್ದೆ. ಅವನಿಗೆ ಯಾರ ಸಂಪರ್ಕವೂ ಇಲ್ಲ. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಎಸ್‌ಐಟಿ ತನಿಖೆಗೆ ಕರೆದಿದ್ದಾರೆ, ಹೋಗಿ ಬಂದಿದ್ದಾನೆ. ತನಿಖೆಯಲ್ಲಿ ಸತ್ಯಾಸತ್ಯತೆ ಹೊರಗೆ ಬರುತ್ತದೆ ಎಂದು ತಿಳಿಸಿದರು.
