ಉದಯವಾಹಿನಿ, ಜಿನೆವಾ: ಫೆಬ್ರವರಿ ತಿಂಗಳಿನಿಂದ ಈವರೆಗೆ ರಷ್ಯಾ ಸೇನೆಯು ಉಕ್ರೇನ್‌ನ 800ಕ್ಕೂ ಹೆಚ್ಚು ನಾಗರಿಕರನ್ನು ಸೆರೆ ಹಿಡಿದಿದ್ದು, ಈ ಪೈಕಿ 77 ಮಂದಿಯನ್ನು ಹತ್ಯೆಗೈದಿದೆ ಎಂದು ಉಕ್ರೇನ್‌ನಲ್ಲಿ ಇರುವ ವಿಶ್ವ ಸಂಸ್ಥೆಯ ಕಣ್ಗಾವಲು ಪಡೆ ತಿಳಿಸಿದೆ. ಇದೇ ವೇಳೆ ಉಕ್ರೇನ್ ದೇಶ ಕೂಡಾ ರಷ್ಯಾ ದೇಶದ ಪ್ರಜೆಗಳನ್ನು ಸೆರೆ ಹಿಡಿದಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಉಕ್ರೇನ್ ದೇಶ ಕೂಡಾ ಉಲ್ಲಂಘನೆ ಮಾಡಿದೆ. ಆದರೆ ರಷ್ಯಾ ದೇಶಕ್ಕೆ ಹೋಲಿಕೆ ಮಾಡಿದರೆ, ಉಕ್ರೇನ್ ದೇಶದ ಸೇನೆ ರಷ್ಯಾ ದೇಶ ಪ್ರಜೆಗಳನ್ನು ಸೆರೆ ಹಿಡಿದಿರುವ ಪ್ರಮಾಣ ಅತಿ ಕಡಿಮೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಅಂತಾರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘನೆ ಮಾಡಿ ಶತ್ರು ರಾಷ್ಟ್ರದ ಪ್ರಜೆಗಳನ್ನು ಸೆರೆ ಹಿಡಿದಿರುವ ರಷ್ಯಾ ದೇಶವು ಆ ನಂತರ ಮಾನವ ಹಕ್ಕುಗಳನ್ನೂ ಉಲ್ಲಂಘನೆ ಮಾಡಿದೆ ಎಂದು ಹೇಳಿದೆ.
ಬಂಧಿತ ಅನ್ಯ ರಾಷ್ಟ್ರಗಳ ಪ್ರಜೆಗಳಿಗೆ ಹಿಂಸೆ, ಸೂಕ್ತವಾಗಿ ನಡೆಸಿಕೊಳ್ಳದಿರೋದು, ಅವರನ್ನು ಇಲ್ಲವಾಗಿಸೋದು ಹೀಗೆ ಹಲವು ಕೃತ್ಯಗಳನ್ನು ಎಸಗಲಾಗುತ್ತಿದೆ ಎಂದು ಕಣ್ಗಾವಲು ಪಡೆ ತಿಳಿಸಿದೆ. ರಷ್ಯಾ ದೇಶವು ಉಕ್ರೇನ್ ನೆಲದಲ್ಲಿ ಮಾತ್ರ, ರಷ್ಯಾ ನೆಲದಲ್ಲೂ ಉಕ್ರೇನ್‌ನ ಪ್ರಜೆಗಳನ್ನು ವಶಕ್ಕೆ ಪಡೆದಿರೋದಾಗಿ ತಿಳಿದು ಬಂದಿದೆ. ಅಂತಾರಾಷ್ಟ್ರೀಯ ನಿಯಮಗಳನ್ನು ಉಲ್ಲಂಘನೆ ಮಾಡಿ ಶತ್ರು ರಾಷ್ಟ್ರಗಳ ಪ್ರಜೆಗಳನ್ನು ವಶಕ್ಕೆ ಪಡೆದಿರುವ ಕೃತ್ಯಗಳು ರಷ್ಯಾ ಹಾಗೂ ಉಕ್ರೇನ್ ಎರಡೂ ದೇಶಗಳಲ್ಲಿ ನಡೆದಿವೆ. ಆದ್ರೆ, ರಷ್ಯಾ ದೇಶವು ಹೆಚ್ಚಿನ ಪ್ರಮಾಣದಲ್ಲಿ ಈ ರೀತಿಯ ಕೃತ್ಯಗಳನ್ನು ಎಸಗಿದೆ ಎಂದು ಕಣ್ಗಾವಲು ಪಡೆ ಅಭಿಪ್ರಾಯಪಟ್ಟಿದೆ.
