
ಉದಯವಾಹಿನಿ, ಜೈಪುರ: ಬೀದಿ ಗೂಳಿಯೊಂದು ಡ್ರಮ್ ಒಳೆ ಸಿಲುಕಿದ ತಲೆಯನ್ನು ಬಿಡಿಸಲಾಗದೆ ಒದ್ದಾಡಿ ಮಾರುಕಟ್ಟೆಯ ತುಂಬೆಲ್ಲ ಓಡಾಡಿ ಕೋಲಾಹಲ ಎಬ್ಬಿಸಿರುವ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ನಡೆದಿದೆ. ಗೂಳಿಯ ಕೊಂಬಿಗೆ ಡ್ರಮ್ ಸಿಲುಕಿದ್ದರಿಂದ ಅದನ್ನು ತೆಗೆಯಲು ಸಾಧ್ಯವಾಗಲಿಲ್ಲ. ಅದರ ದೊಡ್ಡ ಕೊಂಬುಗಳಿಂದಾಗಿ ಡ್ರಮ್ ಸಿಕ್ಕಿಹಾಕಿಕೊಂಡಿತ್ತು. ಗೂಳಿಯ ಅವಾಂತರದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಸ್ಥಳೀಯರ ದೀರ್ಘ ಪ್ರಯತ್ನದ ನಂತರ ಗೂಳಿಯನ್ನು ಡ್ರಮ್‌ನಿಂದ ಬಿಡಿಸಲು ಸಾಧ್ಯವಾಯಿತು. ಇಡೀ ಘಟನೆಯನ್ನು ವೀಕ್ಷಕರು ಸೆರೆಹಿಡಿದಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಗೂಳಿಯು ತನ್ನ ತಲೆಯ ಮೇಲೆ ಸಿಕ್ಕಿಕೊಂಡಿರುವ ನೀಲಿ ಡ್ರಮ್ ಅನ್ನು ಬಾಗಿಸುತ್ತಾ ಮಾರುಕಟ್ಟೆಯಲ್ಲಿ ಅಲೆದಾಡುವುದನ್ನು ಕಾಣಬಹುದು. ಗ್ರಾಮಸ್ಥರು ಅದರ ತಲೆಯಿಂದ ಡ್ರಮ್ ಅನ್ನು ತೆಗೆಯಲು ಪ್ರಯತ್ನಿಸುತ್ತಿದ್ದರು. ಆದರೆ ತನಗೆ ಅಪಾಯವೆಸಗಬಹುದು ಎಂದು ಭಯಭೀತವಾದ ಗೂಳಿಯು ಸ್ಥಳೀಯರನ್ನು ದೂರ ಸರಿಸಿದೆ.
ಈಗ ವೈರಲ್ ಆಗಿರುವ ವಿಡಿಯೊದಲ್ಲಿ ಗೂಳಿಯ ತಲೆಯ ಮೇಲಿನ ಡ್ರಮ್ ಅನ್ನು ತೆಗೆಯಲು ಸ್ಥಳೀಯರು ಹೆಣಗಾಡುತ್ತಿರುವುದನ್ನು ಕಾಣಬಹುದು. ಕೆಲವರು ಗೂಳಿಗೆ ಸಹಾಯ ಮಾಡಲು ಮತ್ತು ಅದರ ತಲೆಯ ಮೇಲೆ ಸಿಲುಕಿಕೊಂಡಿದ್ದ ಡ್ರಮ್ ಅನ್ನು ತೆಗೆಯಲು ಮುಂದೆ ಬಂದರು. ಗೂಳಿ ಪದೇ ಪದೆ ಅವರನ್ನು ದೂರ ತಳ್ಳಲು ಪ್ರಯತ್ನಿಸಿದರೂ ಗ್ರಾಮಸ್ಥರೊಬ್ಬರು ಸುತ್ತಿಗೆಯ ಸಹಾಯದಿಂದ ಡ್ರಮ್ ಅನ್ನು ಹೊರತೆಗೆಯಲು ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ.
