ಉದಯವಾಹಿನಿ, ನವದೆಹಲಿ: ಶ್ರೀಲಂಕಾ ಮೂಲದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ತಮ್ಮ ಬೋಲ್ಡ್ ಲುಕ್ ಮೂಲಕವೇ ಗಮನ ಸೆಳೆದವರು. ʼವಿಕ್ರಾಂತ್ ರೋಣʼ ಚಿತ್ರದಲ್ಲಿ ಸುದೀಪ್ ಜತೆಗೆ ʼರಾ ರಾ ರಕ್ಕಮ್ಮʼ ಎಂದು ಕುಣಿದು ಪಡ್ಡೆ ಹುಡುಗರ ನಿದ್ದೆ ಕದ್ದವರು. ಅವರು ನಟಿಸಿದ ‘ಹೌಸ್‌ಫುಲ್ 2’, ‘ರೇಸ್ 2’, ಮತ್ತು ‘ಕಿಕ್’ನಂತಹ ಹಲವು ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ಕೇವಲ ಸಿನಿಮಾ ಅಲ್ಲದೇ ವೈಯಕ್ತಿಕ ವಿಚಾರವಾಗಿಯೂ ಹೆಚ್ಚು ಸುದ್ದಿಯಲ್ಲಿರುವ ಇವರು ಈ ಬಾರಿ ತಮ್ಮ ಮಾನವೀಯ ಕೆಲಸದ ಮೂಲಕ ಗಮನ ಸೆಳೆದಿದ್ದಾರೆ. ಹೈಡ್ರೋಸೆಫಾಲಸ್ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಕನೊಬ್ಬನನ್ನು ಭೇಟಿ ಮಾಡಿ, ಚಿಕಿತ್ಸೆಗೆ ಅತ್ಯವಾದ ಎಲ್ಲ ವೆಚ್ಚಗಳನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.
ಅಪರೂಪದ ವೈದ್ಯಕೀಯ ಖಾಯಿಲೆ ಹೈಡ್ರೋಕೆಫಾಲಸ್‌ನಿಂದ ಬಳಲುತ್ತಿರುವ ಬಾಲಕನೊಬ್ಬನನ್ನು ಅವರು ಭೇಟಿ ಮಾಡಿದ್ದಾರೆ. ಆತನ ಚಿಕಿತ್ಸೆಗೆ ಅಗತ್ಯವಾದ ಎಲ್ಲ ನೆರವು ನೀಡುವುದಾಗಿ ಘೋಷಿಸಿ ಮಾದರಿಯಾಗಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಹೈಡ್ರೋಕೆಫಾಲಸ್‌ನಿಂದ ಬಳಲುತ್ತಿರುವ ಮಗುವಿನ ಮತ್ತು ಅವರ ಕುಟುಂಬದೊಂದಿಗೆ ಕಳೆದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
