ಉದಯವಾಹಿನಿ, ಮುಂಬೈ: ಬಾಲಿವುಡ್ ನ ಕ್ಯೂಟ್ ಕಪಲ್‌ಗಳಲ್ಲಿ ಒಂದಾ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ಹುಟ್ಟುಹಬ್ಬ ಆಚರಣೆಯ ಸಂಭ್ರಮದಲ್ಲಿದ್ದಾರೆ. ಮಗಳು ದುವಾ ಮೊದಲ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿ ನಟಿ ದೀಪಿಕಾ ಬಹಳ ಲವಲವಿಕೆಯಿಂದ ಪಾಲ್ಗೊಂಡಿದ್ದಾರೆ. 2024ರ ಸೆಪ್ಟೆಂಬರ್ 8ರಂದು ದುವಾ ಜನಿಸಿದ್ದು ಮೊನ್ನೆಯಷ್ಟೇ ಮಗುವಿಗೆ ಒಂದು ವರ್ಷ ಪೂರೈಸಿದೆ.
ಹೀಗಾಗಿ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಪತಿ ರಣವೀರ್ ಸಿಂಗ್ ತಮ್ಮ ಮಗುವಿಗಾಗಿ ಸ್ಪೆಷಲ್ ಚಾಕೊಲೇಟ್ ಕೇಕ್‌ನ ತಯಾರಿಸಿದ್ದಾರೆ. ಇದರ ಜೊತೆ ವಿಶೇಷ ಪೋಸ್ಟ್ ಕೂಡ ಶೇರ್ ಮಾಡಿದ್ದಾರೆ. ದುವಾ ಎಂದರೆ ಪಾರ್ಥನೆ ಎಂದರ್ಥ. ಈ ಹೆಸರನ್ನು ನನಗೆ ಆಯ್ಕೆ ಮಾಡಲು ಮಗು ಜನಿಸಿದ ನಂತರ ಸುಮಾರು ಎರಡು ತಿಂಗಳುಗಳೇ ಬೇಕಾಯಿತು ಎಂದು ದೀಪಿಕಾ ಈ ಹಿಂದೆ ಒಂದು ಪೋಸ್ಟ್‌ನಲ್ಲಿ ತಿಳಿಸಿದ್ದರು. ಇದೀಗ ಅವರು ಹಂಚಿಕೊಂಡ ಹೊಸ ಪೋಸ್ಟ್‌ನಲ್ಲಿ ಮಗಳಿಗಾಗಿ ರೆಡಿ ಮಾಡಿದ್ದ ಕೇಕ್ ಫೋಟೊ ಇದೆ. ಜತೆಗೆ ವಿಶೇಷ ಕ್ಯಾಪ್ಶನ್ ಗಮನ ಸೆಳೆದಿದೆ. ʼʼನನ್ನ ಪ್ರೀತಿ ನೀನು… ನನ್ನ ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಕೇಕ್ ರೆಡಿ ಮಾಡಿದ್ದೇನೆʼʼ ಎಂದು ಬರೆದಿದ್ದಾರೆ.
