ಉದಯವಾಹಿನಿ, ಮಡಿಕೇರಿ: ಮಂಜಿನ ನಗರಿ ಮಡಿಕೇರಿಯ ಐತಿಹಾಸಿಕ ದಸರಾ ಉತ್ಸವಕ್ಕೆ ದಿನಗಣನೆ ಅರಂಭವಾಗಿದೆ. ದಸರಾ ಸಮಿತಿಗಳು ಮಂಟಪ ತಯಾರಿ ಕೆಲಸದಲ್ಲಿ ತೊಡಗಿವೆ. ಆದ್ರೆ ಮಂಟಪಗಳು ಸಾಗುವ ರಸ್ತೆಗಳು ಮಾತ್ರ ಸಂಪೂರ್ಣವಾಗಿ ಗುಂಡಿಮಯವಾಗಿದೆ. ದೇಶ-ವಿದೇಶಗಳಿಂದ ಅಗಮಿಸುವ ಲಕ್ಷಾಂತರ ಪ್ರವಾಸಿಗರು ಈ ಬಾರಿ ಮಡಿಕೇರಿ ನಗರಸಭೆಗೆ ಹಿಡಿಶಾಪ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಡಿಕೇರಿ ನಗರದಲ್ಲಿ ಎಲ್ಲಿ ನೋಡಿದ್ರೂ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿದೆ ನಗರದ ಬಡಾವಣೆಯ ರಸ್ತೆಗಳ ಸ್ಥಿತಿಯಂತೂ ಹೇಳ ತೀರದ್ದಾಗಿದೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ವಾಹನ ಸವಾರರು ದಿನ ನಿತ್ಯ ಸರ್ಕಸ್ ಮಾಡುತ್ತಾ ಸವಾರಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಐತಿಹಾಸಿಕ ದಸರಾಕ್ಕೆ ದಿನಗಣನೆ ಅರಂಭವಾಗಿದ್ರೂ ಮಳೆಯ ನೇಪ ಹೇಳಿಕೊಂಡು ದಿನ ಕಳೆಯುತ್ತಿರುವ ಮಡಿಕೇರಿ ನಗರಸಭೆ ವಿರುದ್ಧ ನಗರದ ನಿವಾಸಿಗಳು ಅಕ್ರೋಶ ವ್ಯಕಪಡಿಸುತ್ತಿದ್ದಾರೆ.

ಎಲ್ಲಿಲ್ಲಿ ರಸ್ತೆಗಳು ಗುಂಡಿಮಯ: ಮಡಿಕೇರಿ ನಗರ ವ್ಯಾಪ್ತಿಗೆ ಒಳಪಡುವ ಅಬ್ಬಿಪಾಲ್ಸ್ ಗೆ ತೆರಳುವ ಮಾರ್ಗ, ಭಗವತಿ ನಗರ ರಸ್ತೆ, ಗೌಳಿಬಿದಿಯ ರಸ್ತೆ ಸೇರಿದಂತೆ ಕೆಲ ಪ್ರಮುಖ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟು, ಬೃಹತ್ ಹೊಂಡಗಳೇ ನಿರ್ಮಾಣವಾಗಿದೆ. ಇಲ್ಲಿನ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಬಿದ್ದು ಕೈಕಾಲು ಮುರಿದುಕೊಳ್ಳುವಂತಿದೆ. ದ್ವಿಚಕ್ರ ಸೇರಿದಂತೆ ಆಟೋ, ಕಾರು ಇನ್ನಿತರ ವಾಹನಗಳ ಸವಾರರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೇ ದಸರಾ ಹಬ್ಬ ಸಮಿಸುತ್ತಿದ್ರು ನಗರಸಭೆ ಆಡಳಿತ ಮಂಡಳಿಯ ಸದಸ್ಯರು ರಸ್ತೆ ಕಾಮಗಾರಿಗಳ ಚಿಂತೆಗೂ ಮುಂದಾಗಿಲ್ಲ.

Leave a Reply

Your email address will not be published. Required fields are marked *

error: Content is protected !!