
ಉದಯವಾಹಿನಿ, ಚಿಕ್ಕಬಳ್ಳಾಪುರ: ಹಬ್ಬ ಹರಿದಿನ, ಮದ್ವೆ ಸೇರಿದಂತೆ ಯಾವುದೇ ಶುಭಸಮಾರಂಭಗಳಿದ್ರೆ ಹೂಗಳಿಗೆ ಸಹಜವಾಗಿಯೇವ ಭಾರೀ ಬೇಡಿಕೆ ಇರಲಿದೆ. ಆದ್ರೆ ಈಗ ಪಿತೃ ಪಕ್ಷದ ಹಿನ್ನೆಲೆಯಲ್ಲಿ ಶುಭ ಸಮಾರಂಭಗಳು ಸಂಪೂರ್ಣ ನಿಲ್ ಆಗಿವೆ. ಹಾಗಾಗಿಯೇ ಈಗ ಫಲಪುಷ್ಪಗಿರಿಧಾಮದ ನಾಡು ಚಿಕ್ಕಬಳ್ಳಾಪುರದಲ್ಲಿ ಹೂ ಬೆಳೆದ ರೈತರು ಈಗ ಬೆಳೆದ ಹೂಗಳನ್ನ ತಿಪ್ಪೆಗೆ ಬಿಸಾಡುವಂತಾಗಿದೆ. ಪಿತೃ ಪಕ್ಷದಿಂದ ರೈತರಿಗೂ ಹಾಗೂ ವರ್ತಕರಿಗೂ ನಷ್ಟ ಎಂಬಂತಾಗಿದೆ.
ಚಿಕ್ಕಬಳ್ಳಾಪುರ ಫಲಪುಷ್ಪದಗಿರಿಧಾಮದ ನಾಡು ಎಂಬ ಪ್ರಖ್ಯಾತಿ ಪಡೆದುಕೊಂಡಿದೆ.
ಇಲ್ಲಿನ ರೈತರು ಹಗಲು ರಾತ್ರಿ ನಿದ್ದೆ ಬಿಟ್ಟು ತರಹೇವಾರಿ ಹೂಗಳನ್ನ ಬೆಳೀತಾರೆ. ಆದ್ರೆ ಈಗ ಈ ಹೂಗಳನ್ನ ಖರೀದಿಸುವವರೇ ಇಲ್ಲ. ಇದಕ್ಕೆಲ್ಲಾ ಕಾರಣ ಪಿತೃ ಪಕ್ಷ. ಹೌದು. ಪಿತೃ ಪಕ್ಷ ಆರಂಭವಾಗಿದ್ದೇ ತಡ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಸಂಪೂರ್ಣ ನಿಂತು ಹೋಗಿದೆ. ರೈತರು (Farmers) ಬೆಳೆದ ಹೂಗಳನ್ನ ಕಷ್ಟಪಟ್ಟು ಮಾರುಕಟ್ಟೆಗೆ ತಂದರೂ ಕೇಳೋರೆ ಇಲ್ಲದಂತಾಗಿದೆ. ಪಿತೃ ಪಕ್ಷದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯೋದಿಲ್ಲ ಹಾಗಾಗಿ ಹೂಗಳಿಗೂ ಬೇಡಿಕೆ ಇರೋದಿಲ್ಲ. ಇದ್ರಿಂದ ಹೂ ಬೆಳೆದ ರೈತರು ತೋಟದಲ್ಲೇ ಹಾಗೆ ಬಿಟ್ರೆ ತೋಟ ಹಾಳಾಗಲಿದೆ.
