ಉದಯವಾಹಿನಿ, ವಾಷಿಂಗ್ಟನ್: ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ದೊಡ್ಡ ದೊಡ್ಡ ಕೃತ್ಯ ನಡೆಯುತ್ತಿರುವುದು ಸಹಜವಾಗಿಬಿಟ್ಟಿದೆ. ವಿದೇಶಗಳೂ ಇದರಿಂದ ಹೊರತಾಗಿಲ್ಲ. ಅಮೆರಿಕದ ಡಲ್ಲಾಸ್ ನಗರದಲ್ಲಿ ನಡೆದಿರುವ ಘಟನೆಯೇ ಇದಕ್ಕೆ ನಿದರ್ಶನ. ಕೇವಲ ಕೆಟ್ಟುಹೋದ ವಾಷಿಂಗ್ ಮಿಷನ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಅಮೆರಿಕದಲ್ಲಿ ಪತ್ನಿ, ಮಗನ ಮುಂದೆಯೇ ಕರ್ನಾಟಕ ಮೂಲದ ಮೋಟೆಲ್ ಮ್ಯಾನೇಜರ್‌ನ ಶಿರಚ್ಛೇದ ಮಾಡಲಾಗಿದೆ. ಮೋಟೆಲ್ ಎಂಬ ಪದ ಮೋಟರ್ ಲಾಡ್ಜ್ ಅನ್ನೋದನ್ನ ಸೂಚಿಸುತ್ತೆ.
ಟೆಕ್ಸಾಸ್‌ನ (Texas) ಪ್ರಮುಖ ನಗರವಾದ ಡಲ್ಲಾಸ್ ಮೋಟೆಲ್‌ನಲ್ಲಿ ಸಹೋದ್ಯೋಗಿಯೇ ಈ ಕೃತ್ಯ ಎಸಗಿರುವುದು ಕಂಡುಬಂದಿದೆ. ಘಟನೆಯ ನಂತರ ಸಹೋದ್ಯೋಗಿಯನ್ನ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ.
ಮೋಟೆಲ್‌ನಲ್ಲಿ ಏನಾಯ್ತು?: ಮೋಟೆಲ್ ಮ್ಯಾನೇಜರ್ ಆಗಿರುವ ಕರ್ನಾಟಕ ಮೂಲದ ಚಂದ್ರ ನಾಗಮಲ್ಲಯ್ಯ (50), 37 ವರ್ಷದ ತನ್ನ ಸಹೋದ್ಯೋಗಿ ಕೊಬೋಸ್ ಮಾರ್ಟಿನೆಜ್ ಮತ್ತು ಮತ್ತೊಬ್ಬ ಮಹಿಳಾ ಸಹೋದ್ಯೋಗಿಗೆ ಕೆಟ್ಟುಹೋಗಿರುವ ವಾಷಿಂಗ್ ಮಿಷಿನ್ ಬಳಸದಂತೆ ಹೇಳಿದ್ದಾರೆ. ಅವರು ನೇರವಾಗಿ ಹೇಳದೇ ಮತ್ತೊಬ್ಬರಿಂದ ಅನುವಾದಿಸುವಂತೆ ಸೂಚನೆ ನೀಡಿದ್ದಾರೆ. ಅಷ್ಟಕ್ಕೇ ಅಸಮಾಧಾನಗೊಂಡ ಕೊಬೋಸ್ ಮಾರ್ಟಿನೆಜ್ ಅಸಮಾಧಾನಗೊಂಡಿದ್ದಾನೆ ಎಂದು ಹೇಳಲಾಗಿದೆ.
