ಉದಯವಾಹಿನಿ, ಮೈಸೂರು: ಅಪಘಾತಗಳನ್ನ ತಡೆಯಬೇಕು ಅಂತಲೇ ರಸ್ತೆ ಸುರಕ್ಷತಾ ಕಾನೂನುಗಳನ್ನ ಮಾಡಿದ್ದೇವೆ. ಆದಾಗ್ಯೂ ಡ್ರೈವರ್‌ಗಳ ತಪ್ಪುಗಳಿಂದ ಅಪಘಾತಗಳು ಸಂಭವಿಸಿದ್ರೆ ಸರ್ಕಾರ ಹೇಗೆ ಹೊಣೆಗಾರಿಗೆ ಆಗುತ್ತೆ? ಅಂತ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಹಾಸನ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ದುರಂತರದಲ್ಲಿ 9 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದರು. ಡ್ರೈವರ್‌ಗಳ ತಪ್ಪಿನಿಂದ ಆಕ್ಸಿಡೆಂಟ್ ಆದ್ರೆ ಸರ್ಕಾರ ಹೇಗೆ ಹೊಣೆಗಾರಿಕೆ ಆಗುತ್ತೆ?.. ಕ್ಯಾಂಟರ್ ನುಗ್ಗಿ ಅಪಘಾತ ಆಗಿದೆ. ಮೃತರ ಕುಟುಂಬ ವರ್ಗಕ್ಕೆ ನಮ್ಮ ಸಂತಾಪ ಇದೆ. ಘಟನೆ ತಿಳಿಯುತ್ತಿದ್ದಂತೆ ಉಸ್ತುವಾರಿ ಸಚಿವ ಕೃಷ್ಣೇಬೇರೇಗೌಡ ಅವರಿಗೆ ಸ್ಥಳಕ್ಕೆ ಭೇಟಿ ನೀಡಿ, ಕ್ರಮ ಕೈಗೊಂಡು ಪರಿಹಾರ ಘೋಷಣೆ ಮಾಡುವಂತೆ ಹೇಳಿದ್ದೆ. ಅದರಂತೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ 10 ಲಕ್ಷ ರೂ. ಪರಿಹಾರ ನೀಡುವಂತೆ ಬಿಜೆಪಿ (BJP) ಆಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಎಷ್ಟು ಪರಿಹಾರ ಕೊಟ್ಟಿದ್ದರು? ಪರಿಹಾರ ಕೊಡೋದು ಮೃತರನ್ನ ವಾಪಸ್ ಕರೆತರ್ತೀವಿ ಅಂತಲ್ಲ. ಸರ್ಕಾರ ಮೊದಲಿನಿಂದಲೂ ಪರಿಹಾರ ಕೊಡ್ತಿದೆ. ಅಪಘಾತದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ., ಆಕಸ್ಮಿಕವಾಗಿ ಮೃತಪಟ್ಟವರಿಗೆ 2 ಲಕ್ಷ ರೂ. ಕೊಡುತ್ತಿದ್ದೇವೆ. ಆರ್ಥಿಕವಾಗಿ ಹಿಂದುಳಿದವರು ಅನ್ನೋ ಕಾರಣಕ್ಕೆ ಮತ್ತು ಸಾಂತ್ವನ ಹೇಳುವ ಉದ್ದೇಶದಿಂದ ಪರಿಹಾರ ಕೊಡಲಾಗುತ್ತಿದೆ ಹೊರತು ಸಾವಿಗೆ ಸಮಾನ ಅಂತಲ್ಲ ಎಂದು ವಿವರಿಸಿದರು.
