ಉದಯವಾಹಿನಿ, ಬಳ್ಳಾರಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಹುಟ್ಟುಹಬ್ಬದ ದಿನವೇ ಮಾಜಿ ಸಚಿವ ಬಿ ನಾಗೇಂದ್ರ ಅವರಿಗೆ ಸಿಬಿಐ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದಾರೆ. ವಾಲ್ಮೀಕಿ ಹಗಣ ಸಂಬಂಧವಾಗಿ ಬಳ್ಳಾರಿಯಲ್ಲಿ ಮೊಟ್ಟೆ ವ್ಯಾಪಾರಿ ಕುಮಾರಸ್ವಾಮಿ ಹಾಗೂ ಅವರ ಮಗ ಬಿಜೆಪಿ ಕಾರ್ಪೊರೇಟರ್ ಗೋವಿಂದರಾಜು ಮನೆ ಮೇಲೆ 10ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ.ವಾಲ್ಮೀಕಿ ನಿಗಮ ಪ್ರಕರಣದ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್ ಖಾತೆಯಿಂದ ಗೋವಿದರಾಜು ಖಾತೆಗೆ 60 ಲಕ್ಷ ರೂ. ಹಣ ವರ್ಗಾಣೆಯಾಗಿತ್ತು. ಇದೇ ವಿಚಾರಕ್ಕೆ ಸಿಬಿಐ ಕಚೆರಿಯಲ್ಲಿ ಗೋವಿಂದರಾಜು ವಿಚಾರಣೆಯನ್ನೂ ಎದುರಿಸಿದ್ದರು.
ನೆಕ್ಕಂಟಿ ನಾಗರಾಜ್‌ನಿಂದ ನಾನು 60 ಲಕ್ಷ ರೂ. ಸಾಲ ಪಡೆದಿದ್ದೆ ಎಂದು ಹೇಳಿಕೆ ಕೊಟ್ಟಿದ್ದರು. ಅಲ್ಲದೇ ಡಿಸೆಂಬರ್ ವೇಳೆಗೆ ಸಾಲದ ಹಣವನ್ನು ವಾಪಸ್ ನೀಡುವುದಾಗಿಯೂ ಗೋವಿಂದರಾಜು ಹೇಳಿದ್ದರು.ಈ ಬೆನ್ನಲ್ಲೇ ಸಿಬಿಐ ಗೋವಿಂದರಾಜು ಹಾಗೂ ಅವರ ತಂದೆ ಕುಮಾರಸ್ವಾಮಿ ಮನೆ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ ಸಿಬಿಐ ಅಧಿಕಾರಿಗಳು ಬ್ಯಾಂಕ್ ವಹಿವಾಟಿನ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಿ, ಬ್ಯಾಂಕ್ ವಹಿವಾಟಿನ ಕುರಿತು ದಾಖಲೆಗಳನ್ನ ಮುಂದಿಟ್ಟುಕೊಂಡು ತಂದೆ ಮಗ ಇಬ್ಬರಿಗೂ ಸಿಬಿಐ ಅಧಿಕಾರಿಗಳು ಡ್ರಿಲ್ ಮಾಡಿದ್ದಾರೆ.
