ಉದಯವಾಹಿನಿ, ಬೆಂಗಳೂರು: ಮಾಜಿ ಸಂಸದ ಪ್ರತಾಪ್ ಸಿಂಹ ಮತೀಯ ಅಂಧ ಭಾವನೆಗಳಿಂದ ಹೊರಗೆ ಬಂದು ಭಾರತೀಯ ನಾಗರಿಕರಾಗಿ ನಡೆದುಕೊಳ್ಳಲಿ ಎಂದು ಸಚಿವ ಮಹದೇವಪ್ಪ ಕಿಡಿಕಾರಿದ್ದಾರೆ.
ದಸರಾ ಉದ್ಘಾಟನೆ ಬಾನು ಮುಷ್ತಾಕ್ ಮಾಡಬಾರದು ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ. ಚುನಾಯಿತ ಸರ್ಕಾರದಲ್ಲಿ ಸಂವಿಧಾನಾತ್ಮಕವಾಗಿ ನಮ್ಮ ನಡೆ ನಿರ್ಧಾರ ಆಗಬೇಕು. ದಸರಾ ಉದ್ಘಾಟನೆ ವಿಚಾರದಲ್ಲಿ ನಾವು ಅದಕ್ಕೆ ಪೂರಕವಾದ ನಿರ್ಧಾರ ಮಾಡಿದ್ವಿ. ಅನವಶ್ಯಕವಾಗಿ ಅಂಕಣಕಾರರ ಆಗಿದ್ದವರು, ಎಂಪಿ ಆದವರು, ಸಂವಿಧಾನ ಹಾಗೂ ಅದರ ಹಕ್ಕುಗಳನ್ನ ತಿಳಿದುಕೊಂಡ ಪ್ರತಾಪ್ ಸಿಂಹ ಅವರು ಹೀಗೆ ಮಾತಾಡಿದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ನ್ಯಾಯಾಲಯ ಸಂವಿಧಾನದ ಕಸ್ಟೋಡಿಯನ್. ಸಂವಿಧಾನದ ಪ್ರಕಾರ ಏನು ಮಾಡಬೇಕು ಅಂತ ಕೋರ್ಟ್ ಹೇಳಿದೆ. ಇನ್ನಾದ್ರು ಅವರು ಬುದ್ಧಿ ಕಲಿಯಲಿ. ಅವರಲ್ಲಿ ತುಂಬಿರೋ ಮತೀಯ ಅಂಧ ಭಾವನೆಗಳು ಹೊರಗೆ ಬಂದು ಭಾರತೀಯ ನಾಗರಿಕರಾಗಿ ನಡೆದುಕೊಳ್ಳಲಿ ಎಂದಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!