ಉದಯವಾಹಿನಿ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ದಂಪತಿಯ ಮೊಬೈಲ್ ಹ್ಯಾಕ್ ಆಗಿದೆ. ಆರ್ಡರ್ ಹೆಸರಿನಲ್ಲಿ ಸೈಬರ್ ವಂಚಕರು ಫೋನ್ ಹ್ಯಾಕ್ ಮಾಡಿದ್ದಾರೆ. ಯಾರೂ ನಮ್ಮ ಹೆಸರಲ್ಲಿ ಹಣ ಕೇಳಿದ್ರೆ ಕೊಡಬೇಡಿ ಎಂದು ಉಪೇಂದ್ರ ಮನವಿ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸೈಬರ್ ವಂಚಕರು ಉದ್ಯಮಿಗಳ ಫೋನ್ ಹ್ಯಾಕ್ ಮಾಡಿ ವಂಚಿಸುತ್ತಿದ್ದರು. ಆದ್ರೀಗ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬಕ್ಕೆ ಸೈಬರ್ ವಂಚಕರು ಗೂಗ್ಲಿ ಕೊಟ್ಟಿದ್ದಾರೆ. ಸೈಬರ್ ವಂಚಕರು ಆರ್ಡರ್ ಹೆಸರಿನಲ್ಲಿ ಮೋಸ ಮಾಡಿದ್ದಾರೆ.ಇಂದು ಬೆಳಗ್ಗೆ ಆಗಿರೋ ಘಟನೆ ಮೊಬೈಲ್ ಹ್ಯಾಕ್ ಆಗಿರೋದನ್ನ ಕಂಡು ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಶಾಕ್ ಆಗಿದ್ದಾರೆ. ನನ್ನ ಮತ್ತು ಪ್ರಿಯಾಂಕಾ ಮೊಬೈಲ್ ಹ್ಯಾಕ್ ಆಗಿದೆ. ಯಾರಾದರೂ ದುಡ್ಡು ಕೇಳಿದ್ರೆ ಕೊಡ್ಬೇಡಿ ಅಂತಾ ಉಪೇಂದ್ರ ವಿಡಿಯೋ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಸದ್ಯ ಉಪೇಂದ್ರ ಈ ಸಂಬಂಧ ದೂರು ದಾಖಲಿಸಿದ್ದಾರೆ.
