ಉದಯವಾಹಿನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇನ್ನೂ ಸ್ವಲ್ಪ ದಿನ ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ನಲ್ಲಿ ಮುಂದುವರಿಯಬಹುದಿತ್ತಪ್ಪ. ಅದು ಯಾಕೋ ಏನೋ ಒಬ್ಬರ ಹಿಂದೊಬ್ಬರು ಹಠಾತ್ ವಿದಾಯ ಘೋಷಿಸಿಯೇ ಬಿಟ್ಟರು. ಕಾರಣವೇನೆಂಬುದು ನಿಗೂಢ. ಆಯ್ತು ರೋಹಿತ್ ಶರ್ಮಾ ಓಕೆ, ಬಟ್ ರನ್ ಮಷಿನ್ ಇನ್ನೂ ಸ್ವಲ್ಪ ದಿನಗಳ ಕಾಲ ಆಡಬಹುದಿತ್ತು. ಯಾಕೆಂದರೆ ಅವರ ಎನರ್ಜಿ ಲೆವೆಲ್‌ಗೇನೂ ಕೊರತೆ ಇರಲಿಲ್ಲ. ಅವರ ಬಾಡಿ ಲಾಂಗ್ವೇಜ್ ಮತ್ತು ಕಾನ್ಫಿಡೆನ್ಸ್ ನೋಡಲು ಒಂಥರಾ ಕಣ್ಣಿಗೆ ಆನಂದ. ಮೈದಾನದಲ್ಲಿದ್ದಾಗ ಅವರ ಜೋಶ್‌ಗೇನು ಕಡಿಮೆ ಆಗಿರಲಿಲ್ಲ. ಬ್ಯಾಟ್ ಹಿಡಿದು ಪೆವಿಲಿಯನ್‌ನಿಂದ ಫೀಲ್ಡ್‌ಗೆ ಎಂಟ್ರಿಯಾಗೋದರಿಂದ ಹಿಡಿದು ಪುನಃ ಪೆವಿಲಿಯನ್ ಕಡೆ ಮುಖ ಮಾಡುವವರೆಗೆ ಸ್ಟೇಡಿಯಂನಲ್ಲಿ ಶಿಳ್ಳೆ, ಕೇಕೆಗಳ ಮಹಾಪುರವೇ ಹರಿದು ಬರುತ್ತಿತ್ತು. ಇಷ್ಟೆಲ್ಲಾ ಇದ್ದರೂ ಟೆಸ್ಟ್ ಮತ್ತು ಇಂಟರ್‌ನ್ಯಾಷನಲ್ ಚುಟುಕು ಕ್ರಿಕೆಟ್‌ಗೆ ಕೊಹ್ಲಿ ಗುಡ್ ಬೈ ಹೇಳಿದ್ಯಾಕೆ? ಈ ಪ್ರಶ್ನೆ ನಿಮಗೂ ಕಾಡುತ್ತಿದೆಯಾ? ನನಗಂತೂ ಕೊಹ್ಲಿಯವರು ವಿದಾಯ ಘೋಷಿಸಿದ ಅಂದಿನಿಂದ ಇಂದಿನವರೆಗೂ ಕಾಡುತ್ತಿದೆ. ಉತ್ತರವೆಂಬ ಪುಣ್ಯಾತ್ಮನ ಪುಣ್ಯಾತ್ಮನ್ನು ಕಂಡುಕೊಳ್ಳಲು ಹರ ಸಾಹಸಪಟ್ಟು ಪರದಾಡಿದೆ. ಆದರೆ ಆ ಪ್ರಶ್ನೆಗೆ ಉತ್ತರ ದೊರಕಲಿಲ್ಲ. ಮತ್ತೆ ಇನ್ನೇನು ಹೇಳೋಕ್ ಹೊರಟಿದಿಯಾ? ಬೇಗ ಹೇಳಯ್ಯ ನಮಗೆ ಟೈಮ್ ಇಲ್ಲ ಅಂತಾ ಗೊಣಗುತ್ತಾ ಇದಿರಾ? ಖಂಡಿತ ಹೇಳ್ತಿನಿ ಬನ್ನಿ. ನೀವು ಓದುಗ ಪ್ರಭುಗಳು ನಿಮ್ಮ ಮಾತನ್ನು ಮೀರಿ ಬರೆದರೆ ಮೆಚ್ಚಲಾರನಾ ಪರಮಾತ್ಮ!
ಭಾರತೀಯ ಕ್ರಿಕೆಟ್ ಜಾಗತಿಕ ಮಟ್ಟದಲ್ಲಿ ದಟ್ಟವಾಗಿ ಬೆಳೆಯಲು ಮುಖ್ಯ ಕಾರಣವೇ ಭಾರತೀಯ ಕ್ರಿಕೆಟ್ ಲೋಕದಲ್ಲಿ ಅರಳಿದ ದೈತ್ಯ ಪ್ರತಿಭೆಗಳು. ಸುನೀಲ್ ಗವಾಸ್ಕರ್‌ರಂತಹ ಚಾಣಕ್ಯ, ಕಪಿಲ್ ದೇವ್‌ರಂತಹ ಪವರ್‌ಫುಲ್ ಕ್ಯಾಪ್ಟನ್, ರಾಹುಲ್ ದ್ರಾವಿಡ್ ಅವರಂತಹ ಜಂಟಲ್‌ಮ್ಯಾನ್, ಸಚಿನ್ ತೆಂಡುಲ್ಕರ್‌ರಂತಹ ಅಪ್ರತಿಮ ಸಾಧಕ, ಮಹೇಂದ್ರ ಸಿಂಗ್ ಧೋನಿಯವರಂತಹ ಶಾಂತ ಸ್ವಭಾವದ ಕೀಪರ್ ಅಂಡ್ ಕ್ಯಾಪ್ಟನ್ ಆದಿಯಾಗಿ ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಂತಹ ಅನೇಕರ ಅಭೂತ ಪೂರ್ವ ಪ್ರದರ್ಶನದಿಂದ ಜಾಗತಿಕ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್ ಎದೆ ಹುಬ್ಬಿಸಿ ನಿಂತಿದೆ. ಹೀಗೆ ಸಾಗುತ್ತಿದ್ದ ಭಾರತೀಯ ಕ್ರಿಕೆಟ್ ಪಯಣ ಕಳೆದ ಮೇ ತಿಂಗಳಲ್ಲಿ ಆಘಾತಕಾರಿ ಘಟನೆಗಳನ್ನು ಎದುರಿಸಿತ್ತು.
