ಉದಯವಾಹಿನಿ, ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ 2025ರ ಏಷ್ಯಾ ಕಪ್ ಟೂರ್ನಿಯ ಪಂದ್ಯದ ನಿಮಿತ್ತ ತಮ್ಮ ನಕಲಿ ಹೆಸರಿನಲ್ಲಿನ ಸೋಶಿಯಲ್ ಮೀಡಿಯಾ ಕಾಮೆಂಟ್‌ಗಳ ವಿರುದ್ಧ ಆಸ್ಟ್ರೇಲಿಯಾ ದಿಗ್ಗಜ ರಿಕಿ ಪಾಟಿಂಗ್ (ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿತ್ತು. ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಸೇರಿದಂತೆ ಆಟಗಾರರ, ಪಾಕ್ ಆಟಗಾರರಿಗೆ ಹ್ಯಾಂಡ್‌ಶೇಕ್ ನೀಡಲು ನಿರಾಕರಿಸಿದ್ದರು.
ಈ ಪಂದ್ಯದ ಬಳಿಕ ರಿಕಿ ಪಾಂಟಿಂಗ್ ಅವರು ಸ್ಕೈ ಸ್ಪೋಟ್ಸ್ ಜೊತೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಕಾಮೆಂಟ್‌ಗಳಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಟೀಮ್ ಪಾಕಿಸ್ತಾನ ಎಂಬ ಹೆಸರಿನ ಪೇಜ್‌ವೊಂದು, ಪಾಂಟಿಂಗ್ ನೀಡಿದ್ದಾರೆಂಬ ಹೇಳಿಕೆಯನ್ನು ಪೋಸ್ಟ್ ಮಾಡಿತ್ತು. ಇದನ್ನು ಗಮನಿಸಿದ ಬಳಿಕ ರಿಕಿ ಪಾಂಟಿಂಗ್ ಪ್ರತಿಕ್ರಿಯೆ ನೀಡಿದ್ದಾರೆ ಹಾಗೂ ತಮ್ಮ ನಕಲಿ ಕಾಮೆಂಟ್‌ಗಳ ವಿರುದ್ಧ ಹರಿಹಾಯ್ದಿದ್ದಾರೆ.
