ಉದಯವಾಹಿನಿ, ದಾವಣಗೆರೆ: ನಗರದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ವಿಸರ್ಜನೆಯ ಶೋಭಾಯಾತ್ರೆಗೆ ಟ್ರ್ಯಾಕ್ಟರ್ ಚಾಲನೆ ಮಾಡಿ ಎಸ್‍ಪಿ ಉಮಾ ಪ್ರಶಾಂತ್ ಚಾಲನೆ ನೀಡಿದರು. ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಇನ್ನೂ ಪೂಜೆ ಮಾಡಿ ಶೋಭಾಯಾತ್ರೆಗೆ ಚಾಲನೆ ನೀಡುತ್ತಿದ್ದಂತೆ ಭಕ್ತರು ಜೈಕಾರ ಕೂಗಿದ್ದಾರೆ. ಶೋಭಾಯಾತ್ರೆಯಲ್ಲಿ 5000ಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದಾರೆ. ಇನ್ನೂ ಡಿಜೆಗೆ ಅನುಮತಿ ನೀಡದ ಹಿನ್ನಲೆ ಜನ ಸಾಂಸ್ಕೃತಿಕ ಕಲಾತಂಡಗಳ ಮೊರೆ ಹೋಗಿದ್ದಾರೆ.
ನಾಸಿಕ್ ಡೋಲ್, ಡೊಳ್ಳು ಕುಣಿತ, ವೀರಗಾಸೆ, ದೇವರ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿವೆ. ಈ ಕಲಾತಂಡಗಳ ಮುಂದೆ ಯುವಕರು ಹಾಗೂ ಯುವತಿಯರು ಸ್ಟೇಪ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಇನ್ನೂ ಜನರ ನಡುವೆ ಪಂಚಮುಖಿ ಗಣಪ ರಾಜ ಗಾಂಭಿರ್ಯದಲ್ಲಿ ಸಾಗುತ್ತಿದ್ದಾನೆ.ಮೆರವಣಿಗೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದಾರೆ.
