ಉದಯವಾಹಿನಿ, ದೆಹಲಿ: ಡ್ರಾಪ್-ಆಫ್ ಪಾಯಿಂಟ್ (ಗಮ್ಯಸ್ಥಾನ) ಬಗ್ಗೆ ಕ್ಯಾಬ್ ಚಾಲಕ ಮತ್ತು ಮಹಿಳೆಯ ನಡುವೆ ತೀವ್ರ ವಾಗ್ವಾದ ನಡೆದ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮಹಿಳೆ ಹಣ ಪಾವತಿಸದೆ ಹೋಗುವುದಾಗಿ ಬೆದರಿಕೆ ಹಾಕಿದಾಗ ವಿವಾದ ಪ್ರಾರಂಭವಾಯಿತು. ಆದರೆ ಚಾಲಕ ರೈಡ್-ಹೇಲಿಂಗ್ ಅಪ್ಲಿಕೇಶನ್‌ನಲ್ಲಿ ನಿಗದಿಪಡಿಸಿದ ಸ್ಥಳವನ್ನು ಮೀರಿ ಹೋಗುವುದಿಲ್ಲ ಎಂದು ಪಟ್ಟು ಹಿಡಿದನು.
ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಹಿಡಿಯಲಾದ ವಾಗ್ವಾದವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದು ವೈರಲ್ ಆಗುತ್ತಿದ್ದಂತೆ ತಪ್ಪು ಯಾರದ್ದು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಚರ್ಚೆಯನ್ನು ಹುಟ್ಟುಹಾಕಿತು. X (ಈ ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ಆ್ಯಪ್-ನಿರ್ದಿಷ್ಟಪಡಿಸಿದ ಡ್ರಾಪ್-ಆಫ್ ಅನ್ನು ಮೀರಿ ಹೋಗಲು ಚಾಲಕ ನಿರಾಕರಿಸುವುದನ್ನು ತೋರಿಸುತ್ತದೆ. ಮಹಿಳೆಯು ತಾನು ಹಣ ಪಾವತಿಸುವುದಿಲ್ಲ ಎಂದು ಹೇಳುತ್ತಾಳೆ. ನೀವು ಪಾವತಿಸದೆ ಹೋಗುವಿರಾದರೆ, ಹೊರಡಿ ಎಂದು ಚಾಲಕನು ಹೇಳಿದ್ದಾನೆ.ನಂತರ ಮಹಿಳೆಯು ತಾನು ಕಾರಿನೊಳಗೆ ಕುಳಿತುಕೊಳ್ಳಬಾರದೆ, ಮತ್ತೆ ಚಾಲನೆ ಮಾಡುವಂತೆ ಒತ್ತಡ ಹೇರಿದ್ದಾಳೆ. ಇದು ಡ್ರಾಪ್-ಆಫ್ ಸ್ಥಳವಾಗಿದ್ದಾಗ ನಾನು ನಿಮ್ಮನ್ನು ಏಕೆ ಒಳಗೆ ಬಿಡಬೇಕು ಎಂದು ಚಾಲಕ ಉತ್ತರಿಸಿದನು. ಬಯಸಿದರೆ ಪೊಲೀಸರಿಗೆ ದೂರು ನೀಡಬಹುದು, ಆದರೆ ನಿಗದಿತ ಸ್ಥಳದಿಂದ ದೂರ ಚಾಲನೆ ಮಾಡುವುದಿಲ್ಲ ಎಂದು ಆಕೆಗೆ ಚಾಲಕ ಉತ್ತರಿಸಿದ್ದಾನೆ.
ಇನ್ನು ತಾನು ಹಣ ಪಾವತಿ ಮಾಡುವುದಿಲ್ಲ ಎಂದು ಮಹಿಳೆ ಹೇಳಿದ್ದಕ್ಕೆ, ನೀವು ಹಣ ಪಾವತಿಸದಿದ್ದರೆ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಚಾಲಕ ಹೇಳಿದ್ದಾನೆ. ಅಲ್ಲದೆ 132 ರೂ. ನನ್ನನ್ನು ಶ್ರೀಮಂತನನ್ನಾಗಿ ಮಾಡುವುದಿಲ್ಲ, ಹಾಗೆಯೇ ನಿಮ್ಮನ್ನೂ ಶ್ರೀಮಂತರನ್ನಾಗಿ ಮಾಡುವುದಿಲ್ಲ ಎಂದು ಹೇಳಿದ್ದಾನೆ.ಯಾವ ಸಂದರ್ಭಗಳಲ್ಲಿ ನಾನು ನಿಮ್ಮ ಕ್ಯಾಬ್ ಅನ್ನು ಬುಕ್ ಮಾಡಿದ್ದೇನೆ ಎಂದು ತಿಳಿದಿಲ್ಲ ಎಂದು ಮಹಿಳೆ ಹೇಳಿದ್ದಕ್ಕೆ ಕೋಪಗೊಂಡ ಚಾಲಕ, ನಾನು ನಿಮ್ಮ ಹಣವನ್ನು ತಿನ್ನುತ್ತಿಲ್ಲ. ಸ್ವಲ್ಪ ಸಂಯಮದಿಂದ ಮಾತನಾಡಿ. ನೀವು ಯಾಕೆ ಹೀಗೆ ಮಾತಾಡುತ್ತೀರಿ? ನೀವು ನನ್ನ ಹಣವನ್ನು ಕೊಡುತ್ತಿಲ್ಲ. ಇಲ್ಲಿವರೆಗೆ ಕರೆತಂದಿದ್ದರೂ ನೀವು ನನ್ನ ಹಣವನ್ನು ಪಾವತಿ ಮಾಡುತ್ತಿಲ್ಲ, ಇದೆಷ್ಟು ಸರಿ ಎಂದು ಪ್ರಶ್ನಿಸಿದ್ದಾನೆ. ಇನ್ನು ಈ ವಿಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಕ್ರಿಯೆಗಳ ಪ್ರವಾಹವನ್ನೇ ಸೃಷ್ಟಿಸಿತು. ಹಲವಾರು ಮಂದಿ ಚಾಲಕನನ್ನು ಬೆಂಬಲಿಸಿದ್ದಾರೆ. ಚಾಲಕ ಹೇಳಿದ್ದು ಸರಿಯಿದೆ. ಅವಳು ಮೊದಲು ಬುಕ್ ಮಾಡಿದ ಸ್ಥಳಕ್ಕೆ ಕರೆದುಕೊಂಡು ಬಂದು ಬಿಟ್ಟಾಗ, ಅವಳು ಅವನನ್ನು ಬೇರೆ ಸ್ಥಳಕ್ಕೆ ಬಿಡುವಂತೆ ಏಕೆ ಒತ್ತಾಯಿಸಬೇಕು? ಎಂದು ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ. ಸೇವೆಯನ್ನು ಬಳಸಿದ ನಂತರ ಹಣ ಪಾವತಿಸಲು ನಿರಾಕರಿಸುವುದು ದುರಹಂಕಾರದ ಪರಮಾವಧಿ. ಇಂತಹ ನಡವಳಿಕೆ ನಾಚಿಕೆಗೇಡು ಎಂದು ಮತ್ತೊಬ್ಬ ಬಳಕೆದಾರರು ಮಹಿಳೆಯನ್ನು ಟೀಕಿಸಿದರು.
