ಉದಯವಾಹಿನಿ, ಲಂಡನ್‌: 1983ರ ವಿಶ್ವಕಪ್ ಫೈನಲ್‌ ಪಂದ್ಯದಲ್ಲಿ ಕಾರ್ಯನಿರ್ವಹಿಸಿದ್ದ ಫೀಲ್ಡ್‌ ಅಂಪೈರ್‌ ಡಿಕಿ ಬರ್ಡ್ ಮಂಗಳವಾರ (ಸೆ.23) ತಮ್ಮ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 92 ವರ್ಷ ವಯಸ್ಸಾಗಿತ್ತು. ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಆಗಿದ್ದ ಡಿಕಿ ಬರ್ಡ್, ಯಾರ್ಕ್‌ಶೈರ್‌ ಮತ್ತು ಲೀಸೆಸ್ಟರ್‌ಶೈರ್ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದರು. ಡಿಕಿ ಬರ್ಡ್ ಎಂದೇ ಹೆಸರುವಾಸಿಯಾಗಿದ್ದ ಅವರ ಪೂರ್ಣ ಹೆಸರು ಹಾರ್ಲ್ಯಾಂಡ್ ಡೆನ್ನಿಸ್ ಬರ್ಡ್.ಏಪ್ರಿಲ್ 19, 1933 ರಂದು ಯಾರ್ಕ್‌ಷೈರ್‌ನ ಬಾರ್ನ್ಸ್ಲಿಯಲ್ಲಿ ಜನಿಸಿದ ಅವರು ಪ್ರತಿಭಾನ್ವಿತ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಗಾಯದಿಂದಾಗಿ ಅವರ ಆಟದ ವೃತ್ತಿಜೀವನವು ಮೊಟಕುಗೊಂಡಿತು. ಆ ಬಳಿಕ ಅಂಪೈರ್ ಆಗಿ ವೃತ್ತಿಜೀವನ ಮುಂದುವರಿಸಿದರು.
ಬರ್ಡ್ 1973 ಮತ್ತು 1996 ರ ನಡುವೆ 66 ಟೆಸ್ಟ್ ಪಂದ್ಯಗಳು ಮತ್ತು 69 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದರು.1983 ರಲ್ಲಿ ಭಾರತ ತಂಡ ಮೊದಲ ಏಕದಿನ ವಿಶ್ವಕಪ್ ಗೆದ್ದಾಗ ಡಿಕಿ ಬರ್ಡ್ ಆನ್-ಫೀಲ್ಡ್ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದರು.
1996 ರಲ್ಲಿ ಲಾರ್ಡ್ಸ್‌ನಲ್ಲಿ ಅವರ ಕೊನೆಯ ಟೆಸ್ಟ್ ಪಂದ್ಯದಲ್ಲಿ, ಇಂಗ್ಲೆಂಡ್ ಮತ್ತು ಭಾರತದ ಆಟಗಾರರು ಗಾರ್ಡ್ ಆಫ್ ಆನರ್ ಮೂಲಕ ಗೌರವಿಸಿದ್ದರು. ಇದು ಅಂಪೈರ್‌ಗೆ ಅಪರೂಪದ ಮತ್ತು ಗಮನಾರ್ಹವಾದ ಗೌರವ. ಈ ಟೆಸ್ಟ್ ಪಂದ್ಯವು ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಅವರ ಚೊಚ್ಚಲ ಪಂದ್ಯವೂ ಆಗಿತ್ತು.

Leave a Reply

Your email address will not be published. Required fields are marked *

error: Content is protected !!