ಉದಯವಾಹಿನಿ, ವಾಷಿಂಗ್ಟನ್ : ಪಾಕಿಸ್ತಾನವು ಇತ್ತೀಚೆಗೆ ತನ್ನ ನಾಗರಿಕರ ಮೇಲೆಯೇ ಬಾಂಬ್ ಹಾಕಿರುವ ವಿಚಾರ ಕುರಿತು ಭಾರತವು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಆಡಿಕೊಂಡಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಎಚ್‌ಆರ್‌ಸಿ) ಪಾಕಿಸ್ತಾನವನ್ನು ಟೀಕಿಸಿದ ರಾಜತಾಂತ್ರಿಕ ಕ್ಷಿತಿಜ್ ತ್ಯಾಗಿ, ಪಾಕಿಸ್ತಾನವು ತನ್ನ ಜನರ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ ಮತ್ತು ಭಾರತದ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಲು ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನಿ ವಾಯುಪಡೆಯು ಖೈಬರ್ ಪಖ್ತುನ್ಖ್ವಾದ ತಿರಾ ಕಣಿವೆಯಲ್ಲಿ ವೈಮಾನಿಕ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಪಾಕಿಸ್ತಾನವು ಈ ಪ್ರದೇಶದ ಮೇಲೆ 8 ಬಾಂಬ್​ಗಳನ್ನು ಹಾಕಿತ್ತು. ಈ ಕುರಿತು ವಿಡಿಯೋವೊಂದು ಹೊರಬಿದ್ದುದ್ದು, ಅಲ್ಲಿ ನೂರಾರು ಜನರು ಸುತ್ತ ನಿಂತಿದ್ದಾರೆ, ಮಕ್ಕಳು, ಮಹಿಳೆಯರು ಎಲ್ಲರೂ ನೆಲದ ಮೇಲೆ ಬಿದ್ದಿರುವುದನ್ನು ಕಾಣಬಹುದು. ಅವಶೇಷಗಳಿಂದ ಕೂಡಿದ ಪ್ರದೇಶ, ಸುಟ್ಟುಹೋದ ವಾಹನಗಳು ಮತ್ತು ಕುಸಿದ ಕಟ್ಟಡಗಳಿಂದ ಶವಗಳನ್ನು ಹೊರತೆಗೆಯುವುದನ್ನು ಕಾಣಬಹುದು. ಪಾಕಿಸ್ತಾನದಲ್ಲಿ ತಾಲಿಬಾನ್ ಸದಸ್ಯರು ಬಾಂಬ್ ತಯಾರಿಸುವ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದ ಕಾಂಪೌಂಡ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಫೋಟದಲ್ಲಿ ಕನಿಷ್ಠ 10 ನಾಗರಿಕರು ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 14 ಉಗ್ರರು ಸಾವನ್ನಪ್ಪಿದ್ದಾರೆ.ಸ್ಫೋಟದಲ್ಲಿ ಹತ್ತಿರದ ಹಲವಾರು ಮನೆಗಳು ಸಹ ನಾಶವಾಗಿವೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!