ಉದಯವಾಹಿನಿ, ನವದೆಹಲಿ: ಟಾಲಿವುಡ್ ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಗ್ಯಾಂಗ್ ಸ್ಟರ್ ಡ್ರಾಮಾ ‘ಒಜಿ’ ಚಿತ್ರ (OG Movie) ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರ ಬಿಡು ಗಡೆಯಾದ ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ಕೇಳಿಬರುತ್ತಿದೆ. ಪವನ್ ಕಲ್ಯಾಣ್, ಇಮ್ರಾನ್ ಹಶ್ಮಿ, ಪ್ರಿಯಾಂಕಾ ಮೋಹನ್ ನಟನೆ ಅಭಿಮಾನಿಗಳನ್ನು ಬಹಳಷ್ಟು ಆಕ ರ್ಷಿಸಿವೆ. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನು ಆಡಿದ್ದು ಇದೀಗ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಪ್ರೇಕ್ಷಕರ ಜೊತೆಯಲ್ಲೇ ‘ಒಜಿ’ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಸುಜಿತ್ ರೆಡ್ಡಿ ನಿರ್ದೇಶನದ ಚಿತ್ರ ಭರ್ಜರಿ ಆ್ಯಕ್ಷನ್ ದೃಶ್ಯಗಳನ್ನು ಹೊಂದಿದ್ದು ಪ್ರೇಕ್ಷಕರು ಕೂಡ ಫಿದಾ ಆಗಿದ್ದಾರೆ. ಸುಜಿತ್ ಈ ಹಿಂದೆ ‘ಸಾಹೋ’ ಚಿತ್ರ ನಿರ್ದೇಶಿಸಿದ್ದು ಯಶಸ್ಸು ಕೂಡ ಕಂಡಿತ್ತು ಇದೀಗ ‘ಒಜಿ’ ಚಿತ್ರ ನೋಡಲು ಮೆಗಾ ಫ್ಯಾಮಿಲಿ ಸ್ಟಾರ್ಸ್, ಪವನ್ ಪುತ್ರ ಅಕಿರಾ ಸೇರಿದಂತೆ ಹಲವರು ಸೆಲೆಬ್ರಿಟಿಗಳು ಆಗಮಿಸಿದ್ದು ಇದಕ್ಕೆ ಸಂಬಂಧಿಸಿದ ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದೇ ರೀತಿ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಹೈದರಾಬಾದ್‌ನಲ್ಲಿ ಈ ಸಿನಿಮಾ ವೀಕ್ಷಣೆ ಮಾಡಿದ್ದಾರೆ.
