ಉದಯವಾಹಿನಿ, ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರ ವಿವಾಹ ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದಲ್ಲಿ ನೆರವೇರಿತು. ರೋಷನ್ ಜೊತೆ ಅನುಶ್ರೀ ಸಪ್ತಪದಿ ತುಳಿದಿದ್ದು, ಈ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಿ ಶುಭ ಹಾರೈಸಿದರು. ಇವರಿಬ್ಬರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್. ಮದುವೆ ಬಳಿಕ ಅನುಶ್ರೀ ಹನಿಮೂನ್ ಎಂದು ಟೈಮ್ ವೇಸ್ಟ್ ಮಾಡದೆ ಮುಂದಿನ ವಾರವೇ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಹಾಜರಾಗಿದ್ದರು.
ಆ ಸಂದರ್ಭ ಅನುಶ್ರೀ ಕಿರುತೆರೆಗೆ ಮರಳುವಾಗ ಸಂಪ್ರದಾಯ ಮುರಿಯಲಿಲ್ಲ. ಶೋನ ಕಾಸ್ಟ್ಯೂಮ್, ನೆಕ್ಲೇಸ್ ಜೊತೆ ಕರಿಮಣಿ ಕೂಡ ಧರಿಸಿದ್ದರು. ಇತ್ತೀಚಿನದ ದಿನಗಳಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು, ನಟಿಯರು, ನಿರೂಪಕಿಯರು ಮದುವೆಯಾದ ನಂತರ ತಾಳಿ ತೆಗೆದು ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಶೋ ಮುಗಿದ ಮೇಲೆ ಮತ್ತೆ ತಾಳಿ ಹಾಕಿಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಅನುಶ್ರೀ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.
ಕೊರಳಲ್ಲಿ ತಾಳಿಯನ್ನು ಕಂಡು ಅನುಶ್ರೀ ಅವರನ್ನು ಅಭಿಮಾನಿಗಳಿಗೆ ಕೊಂಡಾಡಿದರು. ಆದರೆ ಈಗ ಅನುಶ್ರೀ ಮೇಲೆ ಫ್ಯಾನ್ಸ್ ಕೋಪಗೊಂಡಿದ್ದಾರೆ. ಹೊಸದಾಗಿ ಬಿಡುಗಡೆಯಾಗಿರುವ ಮಹಾನಟಿ ಪ್ರೊಮೋದಲ್ಲಿ ನವರಾತ್ರಿ ಸಂಭ್ರಮ ನಡೆಯುತ್ತಿದ್ದು, ಈ ಸಂದರ್ಭ ನವದುರ್ಗೆಯರ ನೃತ್ಯ ವೈಭವ, ನಿಶ್ವಿಕಾ ನಾಯ್ದು ನಾಟ್ಯದ ಝಲಕ್ ತೋರಿಸಲಾಗಿದೆ. ಇವರ ಜೊತೆ ವೇದಿಕೆಯಲ್ಲಿ ನಿರೂಪಕಿ ಅನುಶ್ರೀ ಮಿಂಚಿದ್ದಾರೆ.
