ಉದಯವಾಹಿನಿ, ನವದೆಹಲಿ: ಚಲನ ಚಿತ್ರೋದ್ಯಮದಲ್ಲಿ ಸಾಧನೆ ಮಾಡಿದ್ದ ಕಲಾವಿದರನ್ನು ಗುರುತಿಸುವ ಸಲುವಾಗಿಯೇ ವರ್ಷ ವರ್ಷವೂ ಸೈಮಾ, ಫಿಫಾ ಸೇರಿದಂತೆ ಅನೇಕ ಪ್ರಶಸ್ತಿ ನೀಡಲಾಗುತ್ತದೆ. ಅದರ ಜೊತೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯ ಮಹಾ ಗೌರವ ಕೂಡ ಸಿಗುತ್ತದೆ. ಅಂತೆಯೇ ಈ ಬಾರಿ 71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾ ರಂಭವು ಸೆಪ್ಟೆಂಬರ್ 23 ರಂದು ದೆಹಲಿಯಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಅನೇಕ ಸಿನಿಮಾ ಕಲಾವಿದರು, ದೇಶದ ಗಣ್ಯರು ಆಗಮಿಸಿದ್ದರು.
ಬಾಲ ಕಲಾವಿದೆಯ ಕಲಾ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಈ ಮೂಲಕ ಬಾಲ ಕಲಾವಿದೆ ತ್ರಿಶಾ ಥೋಸರ್ (ಅವರು 5ನೇ ವಯಸ್ಸಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಹಿಂದೆ ಭಾರತ ಸಿನಿಮೋದ್ಯಮದ ಖ್ಯಾತ ನಟ ತಮ್ಮ 6ನೇ ವಯಸ್ಸಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು ಈಗ ಆ ನಟನ ದಾಖಲೆಯನ್ನು ತ್ರಿಶಾ ಥೋಸರ್ ಮುರಿದಿದ್ದಾರೆ.
ತ್ರಿಶಾ ಥೋಸರ್ ಅವರು ನಾಲ್ 2 ಎಂಬ ಮರಾಠಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಸಿಮಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು ಅವರ ನಟನೆಗೆ ಮೆಚ್ಚಿ ಅತ್ಯುತ್ತಮ ಬಾಲನಟಿ ಪ್ರಶಸ್ತಿ ದೊರಕುವಂತಾಗಿದೆ. ಈಗ ಅವರಿಗೆ ಐದು ವರ್ಷ ವಯಸ್ಸಾಗಿದ್ದು ಅವರು ಈ ಚಿತ್ರದಲ್ಲಿ ನಟಿಸಿದಾಗ ಕೇವಲ ಮೂರು ವರ್ಷದವರಾಗಿದ್ದರು. ಈ ಮೂಲಕ ಚಿಕ್ಕ ವಯಸ್ಸಿಗೆ ದೊಡ್ಡ ಸಾಧನೆಯನ್ನು ತ್ರಿಶಾ ಮಾಡಿದ್ದಾರೆ. ಇದಕ್ಕು ಹಿಂದೆ ನಟ ಕಮಲ್ ಹಾಸನ್ ಅವರು ತಮ್ಮ 6ನೇ ವಯಸ್ಸಿನಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು.
