ಉದಯವಾಹಿನಿ,ಉಡುಪಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ ಕುಂದಾಪುರ ತಾಲ್ಲೂಕಿನ ಬಸ್ರೂರಿನಲ್ಲಿ 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜುಲೈ 5ರವರೆಗೆ ಭಾರಿ ಮಳೆ ಸುರಿಯಲಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ 1 ರಿಂದ 3ರವರೆಗೆ ಯಲ್ಲೋ ಅಲರ್ಟ್, ಜುಲೈ 4 ಹಾಗೂ 5ರಂದು ಆರೆಂಜ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ಇದುವರೆಗೂ 59 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು 1 ಮನೆ ಸಂಪೂರ್ಣ ಕುಸಿದಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿಯಲ್ಲಿ 23.8 ಮಿ.ಮೀ, ಬ್ರಹ್ಮಾವರ 26 ಮಿ.ಮೀ, ಕಾಪು 29 ಮಿ.ಮೀ, ಕುಂದಾಪುರ 46.1 ಮಿ.ಮೀ, ಬೈಂದೂರು 71.5 ಮಿ.ಮೀ, ಕಾರ್ಕಳ 27.7 ಮಿ.ಮೀ, ಹೆಬ್ರಿ 26 ಮಿ.ಮೀ ಸೇರಿ ಜಿಲ್ಲೆಯಲ್ಲಿ ಸರಾಸರಿ 38.6 ಮಿ.ಮೀ ಮಳೆಯಾಗಿದೆ.
